ಇತರೆ

ಕೋಟೇಶ್ವರ:ಬೀಜಾಡಿಯಲ್ಲಿ ಮೀನುಗಾರ ಆತ್ಮಹತ್ಯೆ 

Views: 166

ಕನ್ನಡ ಕರಾವಳಿ ಸುದ್ದಿ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬೀಜಾಡಿ ಗ್ರಾಮದ ಶ್ರೀ ಮಾಸ್ತಿ ಅಮ್ಮ ತಂಡೇಲ್ ಮನೆ ನಿವಾಸಿ ಮಹೇಶ (47) ಅವರು ಮನನೊಂದು ಅಗಸ್ಟ್ 9ರಂದು ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹೇಶ್ ಅವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ನಾಲ್ಕೈದು  ತಿಂಗಳಿನಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದಿದ್ದರು. ಸೆ. 30ರ ಬೆಳಗ್ಗೆ ಮೀನುಗಾರಿಕೆಗೆಂದು ಮಲ್ಪೆಗೆ ಹೋಗಿದ್ದು ವಾಪಸು ಮನೆಗೆ ಬಂದಿರಲಿಲ್ಲ. ಅ. 9 ರ ಬೆಳಗ್ಗೆ 7.30ರ ಸುಮಾರಿಗೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪತ್ನಿ ಗೌರಿ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!