ಕರಾವಳಿ

ಕೋಟ:ವಿಕಲಚೇತನನಿಂದ ಅತ್ಯಾಚಾರ:ಯುವತಿಯಿಂದ ದೂರು

Views: 300

ಕೋಟ: ವಿಕಲಚೇತನನೋರ್ವ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಗ್ಗೆ  ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ ಪಡುಕೆರೆ ನಿವಾಸಿ, ವಿಕಲಚೇತನ ರಮಾನಂದ ಐತಾಳ್‌ (61) ಅತ್ಯಾಚಾರ ಎಸಗಿದ ಆರೋಪಿ.

ಯುವತಿಯ ಸಂಬಂಧಿಯಾದ ಆರೋಪಿ, ಆಗಾಗ್ಗೆ ಯುವತಿಯ ಮನೆಗೆ ಬಂದು ಹೋಗುತ್ತಿದ್ದ. ಶನಿವಾರ ವಿಜಯದಶಮಿ ಹಿನ್ನೆಲೆಯಲ್ಲಿ ಮನೆಯವರು ಯಾರೂ ಇಲ್ಲದ ಸಂದರ್ಭ ರಿಕ್ಷಾದಲ್ಲಿ ಮನೆಗೆ ಬಂದಿದ್ದ ರಮಾನಂದ ಸಂತ್ರಸ್ತೆಯಲ್ಲಿ ನೀರು ಕೇಳಿದ್ದು, ನೀರನ್ನು ನೀಡುವ ಸಂದರ್ಭ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಹಾಗೂ ಈ ಬಗ್ಗೆ ಯಾರೆಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ವಿವಾಹಿತನಾಗಿದ್ದು, ಆಗಾಗ್ಗೆ ಅಸಭ್ಯ ವರ್ತನೆಯನ್ನು ತೋರುತ್ತಿದ್ದ. ಈ ಹಿಂದೆಯೂ ಎರಡು ಬಾರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಇದೇ ರೀತಿ ಕೃತ್ಯ ಎಸಗಿದ್ದ. ಆದರೆ ಆತನ ಬೆದರಿಕೆಗೆ ಹೆದರಿ ಸುಮ್ಮನಾಗಿದ್ದಳು. ಶನಿವಾರ ಧೈರ್ಯ ಮಾಡಿ ಆಕೆಯ ಫೋನಿನಲ್ಲಿ ಪೊಲೀಸ್‌ ಎಂದು ಇದ್ದ 112 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅತ್ಯಾಚಾರದ ಬಗ್ಗೆ ದೂರು ನೀಡಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related Articles

Back to top button
error: Content is protected !!