ಕೊರವಡಿ ರೋಟರಿ ಸಮುದಾಯದಳ :ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ

Views: 23
ಕನ್ನಡ ಕರಾವಳಿ ಸುದ್ದಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಸಂಗೀತ ದಿನಾಚರಣೆಯನ್ನು ರೋಟರಿ ಸಮುದಾಯದಳ ಕೊರವಡಿ ಇಲ್ಲಿ ಜೂನ್ 21ರಂದು ಶನಿವಾರ ಸಂಜೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆಯನ್ನು ಶ್ರೀರಾಮಚಂದ್ರ ಉಪಾಧ್ಯಾಯರವರು ನೆರವೇರಿಸಿದರು.ನಂತರ ಅಂತರಾಷ್ಟ್ರೀಯ ಸಂಗೀತ ದಿನಾಚರಣೆಯ ಪ್ರಾಮುಖ್ಯತೆ ಹುಟ್ಟು, ಜಾನಪದ ಶೈಲಿ, ಶ್ರುತಿ, ತಾಳ ,ಸಂಗೀತದ ಎಳೆಗಳನ್ನು ಸ್ವರ ಮಾಧುರ್ಯದಿಂದ ಗಾಯಕ, ಸಂಪನ್ಮೂಲ ವ್ಯಕ್ತಿ ಡಾ. ಗಣೇಶ್ ಗಂಗೊಳ್ಳಿ ಇವರು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.
ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗಾಸನಗಳನ್ನು ಸ್ಥಾಪಕ ಅಧ್ಯಕ್ಷರಾದ ಶ್ರೀ ರಾಮಚಂದ್ರ ಉಪಾಧ್ಯಾಯ ಹೇಳಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿತಿಂಡಿಯನ್ನು ರೋಟರಿ ಸಮುದಾಯದಳ ಕೊರವಡಿ ಸದಸ್ಯರಾದ ಶ್ರೀನಿಧಿ ಉಪಾಧ್ಯಾಯ ಅವರು ನೀಡಿದರು,
ಯೋಗ ಹಾಗೂ ಸಂಗೀತದ ಮಹತ್ವವನ್ನು ಹಾಗೂ ರೋಟರಿ ಸಮುದಾಯದಳದ ಕಾರ್ಯಕ್ರಮಗಳ ಬಗ್ಗೆ ರೋಟರಿ ಸಮುದಾಯದಳ ಕೊರವಡಿ ಇದರ ಅಧ್ಯಕ್ಷರಾದ ಶ್ರೀ ಸುರೇಶ ವಿಠ್ಠಲವಾಡಿ ಅವರು ಅಧ್ಯಕ್ಷೀಯ ನುಡಿಯಲ್ಲಿ ವಿವರವಾಗಿ ತಿಳಿಸಿದರು. ಕಾರ್ಯದರ್ಶಿಯವರಾದ ಸುದೀಪ್ ಕೋಟೇಶ್ವರ ವಂದಿಸಿದರು.