ಕ್ರೀಡೆ

ಕೃಷ್ಣಂ ಅಕ್ಷುವೇಣಿ ತಂಡಕ್ಕೆ  ಅಪ್ಪು ಟ್ರೋಫಿ

Views: 0

ಕುಂದಾಪುರ : ವಕ್ವಾಡಿ 8 ಸ್ಟಾರ್ ಕ್ರಿಕೆಟರ್ಸ್ ಇವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಹ್ವಾನಿತ 60 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ
ಕೃಷ್ಣ ಅಕ್ಷುವೇಣಿ ಕ್ರಿಕೆಟರ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡರು.
ದ್ವಿತೀಯ ಬಹುಮಾನವನ್ನು ಗೆಳೆಯರ ಬಳಗದವರು ಪಡೆದುಕೊಂಡರು.
ಪ್ರಜ್ವಲ್ ಸರಣೆ ಶ್ರೇಷ್ಠ, ಕಾತಿ೯ಕ್ ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಗಣೇಶ್ ಬೀಜಾಡಿ ಬಹುಮಾನ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರದೀಪ ಕಾಂಚನ್ ಬಹುಮಾನ ವಿತರಿಸಿದರು. ಇದೇ ಸಂದಭ೯ದಲ್ಲಿ ದುಬ೯ಲರಿಗೆ ಸಹಾಯಧನ ವಿತರಿಸಲಾಯಿತು.
ಸಭೆಯಲ್ಲಿ ಕ್ರೀಡಾ ಕಾಯ೯ದಶಿ೯ ಪ್ರಕಾಶ್ ಕಳ್ಳಿಗುಡ್ಡೆ, ಅಧ್ಯಕ್ಷ ವಿನಯ ಶೆಟ್ಟಿ, ಕಾಯ೯ದಶಿ೯ ಕಿರಣ ಶೆಟ್ಟಿ, ಅಕ್ಕಯ್ಯ ಶೆಡ್ತಿ ಮತ್ತಿತರರು ಇದ್ದರು.
ಉದಯ ಶೆಟ್ಟಿ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು. ರೋಹಿತ್ ವಂದಿಸಿದರು.

Related Articles

Back to top button
error: Content is protected !!