ಕೃಷಿ
ಕೃಷಿ ಪಂಪಸೆಟ್ ಗಳಿಗೆ ಆಧಾರ ಲಿಂಕ್ ಕಡ್ಡಾಯ ಹಿಂಪಡೆಯಿರಿ : ಕುರಬೂರು ಶಾಂತಕುಮಾರ್

Views: 0
ರಾಜ್ಯ ರೈತರ ಕೃಷಿ ಪಂಪಸೆಟ್ ಗಳಿಗೆ ಆಧಾರ್ ಲಿಂಕ್ ಮಾಡಲು ರೈತರು ಬಿಡುವುದಿಲ್ಲ ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 40 ಲಕ್ಷ ಕೃಷಿ ರೈತರು ಕೃಷಿ ಉತ್ಪನ್ನಗಳನ್ನು ಕಷ್ಟದಲ್ಲಿ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದಭ೯ದಲ್ಲಿ ಆಧಾರ್ ಲಿಂಕ್ ಮಾಡಿದರೆ ಸಬ್ಸಿಡಿ ನೀಡುವುದಾಗಿ ಇಲ್ಲವೇ ಉಚಿತ ವಿದ್ಯುತ್ ನಿಲ್ಲಿಸುತ್ತೇವೆ ಎಂದು ಕೆಇಆರ್ ಸಿ ಆದೇಶ ಹೊರಡಿಸುವುದು ಸರಿಯಲ್ಲ.
ಇಂತಹ ಹೇಳಿಕೆಯನ್ನು ವಾಪಾಸು ಪಡೆಯಬೇಕು, ಇಲ್ಲವೇ, ಮುಖ್ಯಮಂತ್ರಿ ಈ ಆದೇಶವನ್ನು ರದ್ದು ಪಡಿಸಬೇಕು ಎಂದು ರಾಜ್ಯದ ರೈತರ ಮುಖಂಡರು ಸಕಾ೯ರವನ್ನು ಒತ್ತಾಯಿಸಿದ್ದಾರೆ.
ಈ ಎಲ್ಲಾ ವಿಚಾರಗಳನ್ನು ಸಿದ್ದರಾಮಯ್ಯ ಅವರೊಂದಿಗೆ ಚಚಿ೯ಸಲಾಗಿದ್ದು, ರೈತರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದು ತಿಳಿದು ಬಂದಿದೆ.






