ಕನ್ನಡ ಕರಾವಳಿ ಸುದ್ದಿ: ಬಸ್ರೂರು ಸೈಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ಇಲ್ಲಿನ 8ನೇ ತರಗತಿ ವಿದ್ಯಾರ್ಥಿನಿ ಕು.ಖುಷಿ ಶೆಟ್ಟಿಗಾರ್ ಬಸ್ರೂರು ದಿನಾಂಕ 4.07.2026ರಂದು ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ನಡೆದ 14ರ ವಯೋಮಿತಿಯ ಖೋ- ಖೋ ಪಂದ್ಯಾಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ದಿನಾಂಕ 6.7.2026ರಂದು ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ ಇಲ್ಲಿ ನಡೆದ 14ರ ವಯೋಮಿತಿಯ ಕರಾಟೆ ಸ್ಪರ್ಧೆಯಲ್ಲಿಯೂ ಸಹ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈಕೆ ಬಸ್ರೂರು ಸುರಕ್ಷಾ ಪೂಟ್ ವೇರ್ ಇದರ ಮಾಲಿಕ ಹಾಗೂ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹ ಮೊಕ್ತೇಸರರಾದ ಶ್ರೀ ವಿವೇಕಾನಂದ ಶೆಟ್ಟಿಗಾರ್ ಮತ್ತು ಶ್ರೀಮತಿ ಸುಶ್ಮಿತಾ ಶೆಟ್ಟಿಗಾರ್ ಇವರ ಪುತ್ರಿಯಾಗಿರುತ್ತಾರೆ. ಪ್ರತಿಭಾವನ್ವಿತ ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ದೇವಳದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಮತ್ತು ಆಡಳಿತ ಮಂಡಳಿ, ವಿವಿಧ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.