ಇತರೆ

ಕುಂದಾಪುರ: ಗೋಪಾಡಿ ಸಮುದ್ರ ಕಿನಾರೆ ದಡದ ಬಳಿ ಯುವಕನ ಮೃತದೇಹ ಪತ್ತೆ 

Views: 214

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಸಮೀಪದ ಗೋಪಾಡಿ ಚರ್ಕಿಕಡು ಸಮುದ್ರ ಕಿನಾರೆ ದಡದ ಬಳಿ ಯುವಕನ ಮೃತದೇಹ ಸೋಮವಾರ ಅಪರಾಹ್ನ ಪತ್ತೆಯಾಗಿದೆ.

ಮೃತಪಟ್ಟ ಯುವಕನನ್ನು ಬೆಂಗಳೂರು ಮೂಲದ ಆದಿತ್ಯ ನಾಗರಾಜ್ (25) ಎಂದು ಗುರುತಿಸಲಾಗಿದೆ.

ಬೀಚ್‌ಗೆ ತೆರಳಿದಾಗ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದಿರಬಹುದು ಎನ್ನುವ ಶಂಕೆಯಿದೆ. ಆದರೆ ಸಾವಿನ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಬಂಡೆಗಳ ರಾಶಿ ಬಳಿ ಒಂದು ಬ್ಯಾಗ್ ಕಂಡುಬಂದಿದ್ದು ಅದರಲ್ಲಿದ್ದ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಮೂಲಕ ಮೃತರ ಹೆಸರು, ವಿಳಾಸ ಪತ್ತೆ ಹಚ್ಚಲಾಗಿದೆ. ಮನೆಯವರು ಬೆಂಗಳೂರಿನಿಂದ ಬಂದ ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ನಗರ ಠಾಣೆ ವೃತ್ತ ನಿರೀಕ್ಷಕ ಜಯರಾಮ ಗೌಡ, ಪಿಎಸ್‌ಐ ನಂಜಾ ನಾಯ್ ಹಾಗೂ ಸಿಬಂದಿ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಗೋಪಾಡಿಯ ಪ್ರಕಾಶ್ ಕಾಂಚನ್ ಅವರು ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!