ಇತರೆ

ತ್ರಾಸಿ ಬೀಚ್ ಸಮೀಪ ಅಪಘಾತ: ಮತ್ತೊಬ್ಬ ಗಾಯಾಳು ಮೃತ್ಯು

Views: 186

ಕನ್ನಡ ಕರಾವಳಿ ಸುದ್ದಿ: ದ್ವಿಚಕ್ರ ವಾಹನಗಳ ನಡುವೆ ಸೋಮವಾರ ತ್ರಾಸಿ ಬೀಚ್ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮುಂಜಾನೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪಡುಕೋಣೆ ಹಡವು ನಿವಾಸಿ ಪೆಟ್ರಿಕ್ ವಾಸ್ (63) ಮೃತಪಟ್ಟವರು.

ಪೆಟ್ರಿಕ್‌ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತಿ ಬಳಿಕ ಊರಿಗೆ ಆಗಮಿಸಿ ವೆಲ್ಡಿಂಗ್ ಶಾಪ್ ನಡೆಸಿಕೊಂಡಿದ್ದರು. ಸೋಮವಾರ ಸಂಬಂಧಿಕರನ್ನು ಭೇಟಿಯಾಗಿ ಮನೆಗೆ ಮರಳುವಾಗ ಈ ಅಪಘಾತ ನಡೆದಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸೋಮವಾರ ತ್ರಾಸಿ ಬೀಚ್ ಬಳಿಯ ಅರಮ ದೇವಸ್ಥಾನದ ಎದುರು ಅಪಘಾತ ಸಂಭವಿಸಿದ್ದು, ಭಟ್ಕಳ ಸಣಭಾವಿ ನಿವಾಸಿ ದೀಪಕ್‌ ನಾಗಪ್ಪ ನಾಯ್ಕ (23) ಮೃತಪಟ್ಟಿದ್ದರು. ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಪೆಟ್ರಿಕ್ ಹಾಗೂ ಅವರ ಪುತ್ರಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!