ಸಾಂಸ್ಕೃತಿಕ

ಕುಂಭಮೇಳದ ಚೆಲುವೆ ಮೊನಾಲಿಸಾ ಮಲಯಾಳಂ ಚಿತ್ರದಲ್ಲಿ ಮುಖ್ಯ ಪಾತ್ರ 

Views: 63

ಕನ್ನಡ ಕರಾವಳಿ ಸುದ್ದಿ: ಮಹಾಕುಂಭ ಮೇಳದಲ್ಲಿ ತನ್ನ ಸೌಂದರ್ಯದಿಂದ ಗಮನ ಸೆಳೆದಿದ್ದ ಬಟ್ಟಲು ಕಂಗಳ ಸುಂದರಿ ಮೊನಾಲಿಸಾ ಚಿತ್ರರಂಗದವರ ಕಣ್ಣಿಗೆ ಈಗಾಗಲೇ ಬಿದ್ದಾಗಿದೆ. ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮಲಯಾಳಂ ಚಿತ್ರರಂಗಕ್ಕೆ ಮೊನಾಲಿಸಾ ಪಾದಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಎಲ್ಲರ ಕಣ್ಣಿಗೆ ಬಿದ್ದಿದ್ದಳು. ಅವಳ ಮನಮೋಹಕ ಕಂಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಆಕೆಯ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದವು. ಇದೀಗ ಈಕೆ ಮಾಲಿವುಡ್‌ ಅಂಗಳಕ್ಕೆ ಲಗ್ಗೆ ಇಡುತ್ತಿದ್ದಾರೆ.

‘ನಾಗಮ್ಮ’ ಎಂಬ ಚಿತ್ರದಲ್ಲಿ ಮೊನಾಲಿಸಾ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಿ,ಬಿನು ವರ್ಗೀಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೀಲಿ ಜಾರ್ಜ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೊನಾಲಿಸಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

Related Articles

Back to top button