ಕರಾವಳಿ

ಕುಂದಾಪುರ :132 ನೇ ಅಂಬೇಡ್ಕರ್ ಜಯಂತಿ ಆಚರಣೆ 

Views: 2

 

 

 

ಕುಂದಾಪುರ : ಕನಾ೯ಟಕ ರಾಜ್ಯ ದಲಿತ ಸಂಘಷ೯ ಸಮಿತಿ ಕುಂದಾಪುರ ತಾಲೂಕು ಘಟಕ ಇದರ ವತಿಯಿಂದ ಡಾ. ಬಿ. ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ  ಆಚರಿಸಲಾಯಿತು.

ಕುಂದಾಪುರ ಠಾಣಾಧಿಕಾರಿ ಪ್ರಸಾದ್.ಕೆ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾಪ೯ಣೆ ಮಾಡಿ, ದೀಪ ಪ್ರಜ್ವಲಿಸಿ, ಕಾಯ೯ಕ್ರಮಕ್ಕೆ  ಚಾಲನೆ ನೀಡಿದರು.

ಅವರು ಮಾತನಾಡಿ, ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಪೂತಿ೯. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಅವರ ಆದಶ೯ ಎಲ್ಲರ ಜೀವನಕ್ಕೂ ದಾರಿ ಎಂದು ಶುಭ ಹಾರೈಸಿದರು.

ಕೆ. ಸಿ. ರಾಜು ಬೆಟ್ಟಿನಮನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವಕೀಲರಾದ ಮಂಜುನಾಥ ಗಿಳಿಯಾರ್, ವಾಸುದೇವ ಮುದೂರು, ಸುರೇಶ್ ಹಕ್ಲಾಡಿ, ಅಶೋಕ ಮೊಳಹಳ್ಳಿ, ಚಂದ್ರ ಶೇಖರ್ ಮೊಳಹಳ್ಳಿ, ಉದಯ ಕುಂದಬಾರಂದಾಡಿ ಉಪಸ್ಥಿತರಿದ್ದರು.

ಸುರೇಶ್ ಹಕ್ಲಾಡಿ ಸ್ವಾಗತಿಸಿದರು. ಶಾರದ ಗುಡ್ಡೆಯಂಗಡಿ ನಿರೂಪಿಸಿದರು. ನಾಗರಾಜ್ ಸಟ್ವಾಡಿ ವಂದಿಸಿದರು.

Related Articles

Back to top button
error: Content is protected !!