ಕರಾವಳಿ

ಕುಂದಾಪುರ ಸಮೀಪ ಬೀಜಾಡಿಯಲ್ಲಿ ನಿಗೂಢ ದುವಾ೯ಸನೆ : ಕಾರ್ಯಾಚರಣೆ

Views: 0

ಕುಂದಾಪುರ : ಇಲ್ಲಿನ ಬೀಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ವಿಚಿತ್ರ ದುವಾ೯ಸನೆ ಕಂಡು ಬಂದಿದ್ದು, ಸ್ಥಳೀಯರ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ.

ಕೆಲವು ಮನೆಗಳಲ್ಲಿ ರಾತ್ರಿ ಹೊತ್ತು ದುವಾ೯ಸನೆಯಿಂದ ಕೂಡಿದ ಗಾಳಿಯಿಂದ ಅನೇಕರು ಉಸಿರಾಟಕ್ಕೆ ತೊಂದರೆಯಾಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದಾರೆ.

ಈ ಕುರಿತು ಇಲ್ಲಿನ ಜನರು ಸ್ಥಳೀಯ ಆಡಳಿತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಆರೋಗ್ಯ ಇಲಾಖೆ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕೋಳ, ಬಾವಿ, ಕೆರೆಯನ್ನು ಪರಿಶೀಲಿಸಿ, ನೀರು, ಮಣ್ಣು ಇನ್ನಿತರ ವಸ್ತುಗಳನ್ನು ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದಾರೆ.

ಸ್ಥಳಕ್ಕೆ ಬೇಟಿ ನೀಡಿದ ಅಧಿಕಾರಿಗಳು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ದುವಾ೯ಸನೆಗೆ ಕಾರಣವೇನು ಎನ್ನುವುದರ ಬಗ್ಗೆ ಸುದೀಘ೯ ಪರಿಶೀಲನೆ ಮತ್ತು ಚಚೆ೯ ನಡೆಯುತ್ತಿದೆ.

Related Articles

Back to top button
error: Content is protected !!