ಕರಾವಳಿ
ಕುಂದಾಪುರ: ಮದ್ದುಗುಡ್ಡೆಯ ಗುರು ರಾಘವೇಂದ್ರ ಭಜನ ಮಂದಿರದಲ್ಲಿ ಚಿನ್ನಾಭರಣ ಕಳವು

Views: 216
ಕುಂದಾಪುರ: ಇಲ್ಲಿನ ಮದ್ದುಗುಡ್ಡೆಯ ಶ್ರೀ ಗುರು ರಾಘವೇಂದ್ರ ಭಜನ ಮಂದಿರದಲ್ಲಿ ಚಿನ್ನಾಭರಣ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ಅ.18ರ ಮಧ್ಯಾಹ್ನ 1.30 ರಿಂದ ಸಂಜೆ 6 ಗಂಟೆಯ ಮಧ್ಯದ ಅವಧಿಯಲ್ಲಿ ಕಳವು ಮಾಡಲಾಗಿರುವ ಬಗ್ಗೆ ದೂರು ದಾಖಲಾಗಿದೆ.ಸುಮಾರು 75 ಸಾವಿರ ರೂ. ಮೌಲ್ಯದ 12 ಗ್ರಾಂ ತೂಕದ ಚಿನ್ನದ ತಿಲಕವನ್ನು ಕಳವು ಮಾಡಲಾಗಿದೆ.
ಶ್ರೀ ಗುರು ರಾಘವೇಂದ್ರ ಭಜನ ಮಂದಿರದ ಅಧ್ಯಕ್ಷ ರಮೇಶ್ ಮದ್ದುಗುಡ್ಡೆ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






