ಕರಾವಳಿ
ಕುಂದಾಪುರ ನಗರ ಪೊಲೀಸ್ ನಿರೀಕ್ಷಕರಾಗಿ ನಂಜಪ್ಪ ನೇಮಕ

Views: 114
ಕುಂದಾಪುರ: ಕಳೆದ ಕೆಲವು ದಿನಗಳಿಂದ ಖಾಲಿಯಾಗಿದ್ದ ಕುಂದಾಪುರ ನಗರ ಪೊಲೀಸ್ ಠಾಣೆ ನಿರೀಕ್ಷಕ ಹುದ್ದೆಗೆ ನಂಜಪ್ಪ ಎನ್. ಅವರನ್ನು ನೇಮಿಸಲಾಗಿದೆ.
2003ರಲ್ಲಿ ಪಿಎಸ್ಐ ಆಗಿ ಸೇವೆಗೆ ನಿಯುಕ್ತಿಯಾದ ನಂಜಪ್ಪ ಅವರು ಶಿವಮೊಗ್ಗ, ದಾವಣಗೆರೆ, ಹಾವೇರಿ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದು ಬಳಿಕ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿದ್ದು ಕಡೂರು, ಭದ್ರಾವತಿಯಲ್ಲಿ ಹಾಗೂ ಪ್ರಸ್ತುತ 4 ವರ್ಷದಿಂದ ಗಂಗೊಳ್ಳಿ ಕರಾವಳಿ ಕಾವಲುಪಡೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.