ಧಾರ್ಮಿಕ

ಕುಂದಾಪುರ: ಧರ್ಮಸಿಂಧು ಸ್ಪಿರಿಚುವಲ್ ಲೈಫ್‌, “ಮಹಾಶಿವರಾತ್ರಿ ಮಹೋತ್ಸವ-2025” ಸಂಪನ್ನ 

Views: 126

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಮುಳ್ಳುಗುಡ್ಡೆ ಧರ್ಮಸಿಂಧು ಸ್ಪಿರಿಚುವಲ್ ಲೈಫ್‌ನಲ್ಲಿ ಮಹಾಶಿವರಾತ್ರಿ ಮಹೋತ್ಸವ 2025  ವಿಜೃಂಭಣೆಯಿಂದ ನಡೆಯಿತು.

ಪರಮಶಿವನ ಭಕ್ತರು ಈ ಮಹಾ ಧಾರ್ಮಿಕ ಸೇವೆಯಲ್ಲಿ ಭಾಗವಹಿಸಿ ಶಿವನ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಅನುಭವವನ್ನು ಪಡೆದರು.ಈ ಪವಿತ್ರ ಸಂದರ್ಭದಲ್ಲಿ ಜಾತಿ ಮತ ಭೇದವಿಲ್ಲದೇ ನೆರೆದ ಶಿವ ಭಕ್ತರು 1,00,800 ಸಂಖ್ಯೆಯಲ್ಲಿ ಶಿವ ಪಂಚಾಕ್ಷರಿ ಜಪ, 10,080 ತರ್ಪಣ, ಮತ್ತು 1,008 ಸಂಖ್ಯೆಯಲ್ಲಿ ಹವನ ನೆರವೇರಿಸಿದ್ದು, ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಳಗೊಂಡಿತು.

ಧರ್ಮಸಿಂಧು ಸ್ಪಿರಿಚುವಲ್ ಲೈಫ್ ಸಂಸ್ಥಾಪಕ ಡಾ. ರಾಘವೇಂದ್ರ ಉಳ್ಳೂರ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿತ್ತು.ಸಂಜೆ 7 ರಿಂದ 7:30 ರವರೆಗೆ ಜಪ ದೀಕ್ಷೆ, ಸಂಜೆ7:30 ರಿಂದ 10:00 ರವರೆಗೆ ಜಪ, ತರ್ಪಣ, ಹವನ,ಪ್ರಸಾದ ವಿತರಣೆ,ರಾತ್ರಿ 9:30 ರಿಂದ ಪ್ರಭಾತದವರೆಗೆ ಶಿವನ ಭಜನೆ, ಭಕ್ತಿಗೆ ತೊಡಗುವ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು, ಧಾರ್ಮಿಕ ಸೇವೆಯಲ್ಲಿ ತಮ್ಮ ಸಮರ್ಪಣಾ ಭಾವ ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಭಕ್ತಜನರಿಗೆ, ಸ್ವಯಂಸೇವಕರಿಗೆ ಹಾಗೂ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಸಾಧಕರಿಗೆ ಧರ್ಮಸಿಂಧು ಸ್ಪಿರಿಚುವಲ್ ಲೈಫ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ವೈದಿಕ ಮತ್ತು ತಾಂತ್ರಿಕ ಕ್ರಮದ ಈ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಹವನದ ಹೊಗೆಯಲ್ಲಿ ಶಿವನ ದರ್ಶನ ಪಡೆದರು.

ಹೆಚ್ಚಿನ ಮಾಹಿತಿಗಾಗಿ: ಡಾ. ರಾಘವೇಂದ್ರ ಉಳ್ಳೂರ.ಧರ್ಮಸಿಂಧು ಸ್ಪಿರಿಚುವಲ್ ಲೈಫ್, ಮುಳ್ಳುಗುಡ್ಡೆ, ಕುಂದಾಪುರ

ಮೋಬೈಲ್: 9499662888, 9686572744

Related Articles

Back to top button