ಕರಾವಳಿ
ಕುಂದಾಪುರ: ತೆಕ್ಕಟ್ಟೆಯಲ್ಲಿ ಮುಸುಕುದಾರಿ ತಂಡದಿಂದ ಕಳವು ಯತ್ನ!

Views: 229
ಕುಂದಾಪುರ ಇಲ್ಲಿಗೆ ಸಮೀಪ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಶಾನುಭಾಗ್ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಗಳಿಗೆ ಮುಸುಕುದಾರಿಗಳ ತಂಡವೊಂದು ಕಳವಿಗೆ ಯತ್ನಿಸಿದ ಘಟನೆ ಸಂಭವಿಸಿದೆ.
ಮುಸುಕು ದಾರಿಗಳ ತಂಡದ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸರೆಯಾಗಿದೆ.ತೆಕ್ಕಟ್ಟೆ ಕೆನರಾ ಬ್ಯಾಂಕ್ ಸಮೀಪದ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿರುವ ಮೀನಾಕ್ಷಿ ಫರ್ನಿಚರ್ ಶೋರೂಮ್, ಗೋದಾಮು, ಟೈಲರ್ ಶಾಪ್ ಶೆಟರ್ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಲನವಲನ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.