ಯುವಜನ

ಕುಂದಾಪುರ: ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಪೋಕ್ಸೋ ಪ್ರಕರಣ ದಾಖಲು, ಆರೋಪಿಗಾಗಿ ಹುಡುಕಾಟ!

Views: 1039

ಕುಂದಾಪುರ: ಬೆಳ್ವೆ ಗ್ರಾಮದ ನಿವಾಸಿಯಾಗಿರುವ ಪಿಯುಸಿ ವಿದ್ಯಾರ್ಥಿನಿಗೆ ಆಸೆ ಆಮಿಷ ಒಡ್ಡಿ, ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

ಮಿಥುನ್‌ ಎನ್ನುವ ಯುವಕ ಪ್ರೀತಿಸುವ ನಾಟಕವಾಡಿ ಕಳೆದ 5 ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ವಿದ್ಯಾರ್ಥಿನಿಯನ್ನು ಅತ್ಯಾಚಾರ ನಡೆಸಿದ್ದ.

ವಿದ್ಯಾರ್ಥಿನಿಯ ತೀವ್ರ ಯಾತನೆಯನ್ನು ಗಮನಿಸಿದ ಪೋಷಕರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಶಂಕರನಾರಾಯಣ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Articles

Back to top button
error: Content is protected !!