ಕುಂದಾಪುರ: ಕಾರ್ಮಿಕ ಇಲಾಖೆ ಅಧಿಕಾರಿ ಸೋಗಿನಲ್ಲಿ ಕೋಟೇಶ್ವರ ಮತ್ತು ವಕ್ವಾಡಿ ಹೋಟೆಲ್ ಗೆ ಕರೆ ಮಾಡಿ ಹಣ ವಸೂಲಿಗೆ ಯತ್ನ!
Views: 129
ಕನ್ನಡ ಕರಾವಳಿ ಸುದ್ದಿ: ತಾನು ಕಾರ್ಮಿಕ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಹೊಟೇಲ್ ಹಾಗೂ ವಿವಿಧ ಸಂಸ್ಥೆಗಳಿಗೆ ಕರೆ ಮಾಡಿ ಹಣ ವಸೂಲಿಗೆ ಯತ್ನಿಸಿದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬನ ವಿರುದ್ಧ ಕುಂದಾಪುರ ವೃತ್ತದ ಕಾರ್ಮಿಕ ನಿರೀಕ್ಷಕರು ದೂರು ನೀಡಿದ್ದು ಪತ್ರಿಕಾ ಪ್ರಕಟನೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಜ.14ರಂದು ಶಿವರಾಜ ಎಂಬ ವ್ಯಕ್ತಿ ಕಾರ್ಮಿಕ ಇಲಾಖೆಯ ನಿರೀಕ್ಷಕನೆಂದು ಹೇಳಿಕೊಂಡು ಕೋಟೇಶ್ವರದ ಮೆ| ಸಹನಾ ಆರ್ಕಿಡ್ ಹೊಟೇಲ್ ಹಾಗೂ ವಕ್ವಾಡಿಯ ಮೆ। ಫಾರ್ಚೂನ್ ವಿಲೇಜ್ ಹೋಟೇಲ್ ಗೆ 8150816922 ಸಂಖ್ಯೆಯಿಂದ ಕರೆ ಮಾಡಿದ್ದಾನೆ. ಸಂಸ್ಥೆಯ ಲೈಸೆನ್ಸ್ ನೋಂದಣಿ ಹಾಗೂ ನವೀಕರಣ ಮಾಡಿಕೊಡುವುದಾಗಿ ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕುಂದಾಪುರ ವೃತ್ತದ ಕಾರ್ಮಿಕ ನಿರೀಕ್ಷಕ ವಿಜೇಂದ್ರ. ಕೆ ಶಿವರಾಜ ಎಂಬ ವ್ಯಕ್ತಿಯು ನಮ್ಮ ಇಲಾಖೆಯಲ್ಲಿಲ್ಲ. ಆತ ಇಲಾಖೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ಉದ್ದಿಮೆದಾರರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.






