ಕರಾವಳಿ

ಕುಂದಾಪುರ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆ ಮನೆ ಮೇಲೆ ಲೋಕಾಯುಕ್ತ ದಾಳಿ

Views: 1

ಕುಂದಾಪುರ :ಇಂದು ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

ರಾಜೇಶ್ ಬೇಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಯುತ್ತಿದ್ದು, ಕುಂದಾಪುರ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವಾಸಿಯಾಗಿದ್ದ ರಾಜೇಶ್ ಬೇಳ್ಕೆರೆ ಹಲವು ವರ್ಷಗಳಿಂದ ಕುಂದಾಪುರದಲ್ಲಿ ನೆಲೆಸಿದ್ದಾರೆ. ಏಕಕಾಲದಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಉಡುಪಿ ಕಚೇರಿ ಅಂಕೋಲದಲ್ಲಿರುವ ಮನೆ ಮೇಲೆ ತಪಾಸಣೆ ನಡೆಯುತ್ತಿದೆ.

Related Articles

Back to top button