ಕರಾವಳಿ

ಕುಂದಾಪುರ: ಆಲೂರಿನಲ್ಲಿ ಕೋಳಿ ಪಡೆ, ಜುಗಾರಿ ಆಡುತ್ತಿದ್ದ ನಾಲ್ವರು ಬಂಧನ

Views: 204

ಕನ್ನಡ ಕರಾವಳಿ ಸುದ್ದಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿಪಡೆ ನಡೆಸಿ, ಜುಗಾರಿ ಆಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಆಟಕ್ಕೆ ದಾಳಿ ನಡೆಸಿ ಕೋಳಿ ಹುಂಜಗಳ ಕಾಲಿಗೆ ಕೋಳಿ ಬಾಲ್ ನ್ನು ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದ ಆಲೂರು ಗ್ರಾಮದ ವೆಂಕಟೇಶ (42) ಮತ್ತು ಮಹೇಶ (29), ಹೊಸಂಗಡಿ ಗ್ರಾಮದ ಅಖಿಲೇಶ (27) ನಾರ್ಕಳಿ ಹರ್ಕೂರು ಗ್ರಾಮದ ಚಿಕ್ಕಯ್ಯ (65) ಇವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕೋಳಿ ಜುಗಾರಿ ಆಟಕೆ ಬಳಸಿದ 5 ಕೋಳಿ ಹುಂಜ, ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದ ನಗದು 6,820 ರೂ. ನಗದು, ಆಟಕ್ಕೆ ಬಳಸಿದ್ದ ಇನ್ನಿತರ ವಸ್ತುಗಳನ್ನು  ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 39,320 ರೂ. ಎಂದು ಅಂದಾಜಿಸಲಾಗಿದೆ.

Related Articles

Back to top button
error: Content is protected !!