ಆರೋಗ್ಯ

ಕುಂದಾಪುರದಲ್ಲಿ ‘ಪರಿಸರ- ನಮಗೊಂದಿಷ್ಟು ಉಳಿಸಿ’ ಸ್ವಚ್ಛತಾ ಜಾಗೃತಿ

Views: 0

video
play-sharp-fill
ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಕುಂದಾಪುರ ಪುರಸಭೆ ಸಯುಕ್ತ ಆಶಯದಲ್ಲಿ ಶನಿವಾರ ಸ್ವಚ್ಛತಾ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಲ ನಗರ ಅಭಿಯಾನ ಅಡಿಯಲ್ಲಿ ‘ಪರಿಸರ- ನಮಗೊಂದಿಷ್ಟು ಉಳಿಸಿ’ ಬೀದಿ ನಾಟಕ,ಕಾಲ್ನಡಿಗೆ ಜಾಥಾ ನಡೆಯಿತು.

ಪುರಸಭೆಯ ಕಚೇರಿಯ ಮುಂಭಾಗದಲ್ಲಿ ಜೆ ಸಿ ಕುಂದಾಪುರ ಸಿಟಿ ಇದರ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಚಾಲನೆ ನೀಡಿದರು.

ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳ ಕಾಲ್ನಡಿಗೆ ಜಾತವು ಪುರಸಭಾ ಕಚೇರಿ ಮುಂಬಾಗದಿಂದ ಆರಂಭಗೊಂಡು ಶಾಸ್ತ್ರಿ ಸರ್ಕಲ್ ವರೆಗೆ ನಡೆಸಿ ಅಲ್ಲಲ್ಲಿ ಪರಿಸರ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದೀಪ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

 

 

Related Articles

Back to top button