ಕರಾವಳಿ

ಕುಂದಾಪುರಕ್ಕೆ ಕೆಲಸಕ್ಕೆ ತೆರಳಿದ್ದ ಗಂಗೊಳ್ಳಿಯ ವಿವಾಹಿತೆ ನಾಪತ್ತೆ

Views: 206

ಗಂಗೊಳ್ಳಿ:ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾ ಖಾರ್ವಿ (32) ಅವರು ಮನೆಯಿಂದ ಕೆಲಸಕ್ಕೆಂದು ಹೊರಟು ಹೋಗಿದ್ದವರು ನಾಪತ್ತೆಯಾಗಿದ್ದಾರೆ.

ಆಗಸ್ಟ್ 12ರಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಹೊರಟು ಬಂದಿದ್ದು, ಸಂಜೆ ಪತಿ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಈ ಬಗ್ಗೆ ಬಟ್ಟೆ ಮಳಿಗೆಯ ಮಾಲಕರಲ್ಲಿ ವಿಚಾರಿಸಿದಾಗ ಆ ದಿನ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದರು.

ಅವರಿಗೆ ಫೋನ್ ಮಾಡಿದಾಗ ಬೆಂಗಳೂರಿನಲ್ಲಿದ್ದು, ನನ್ನನ್ನು ಹುಡುಕುವುದು ಬೇಡ ಎನ್ನುವುದಾಗಿ ತಿಳಿಸಿ, ಫೋನ್‌ ಸ್ವಿಚ್‌ ಆಫ್‌ ಮಾಡಿದ್ದರು.

ಪತಿ ಮಿಥುನ್‌ ಪುತ್ರನ್‌ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button