ಯುವಜನ
ಕಾಲೇಜು ವಿದ್ಯಾರ್ಥಿಗಳ ನಡುವೆ ಜಗಳ: ಸಹಪಾಠಿ ಬೆನ್ನಿಗೆ ಪೆನ್ ಚಾಕುವಿನಿಂದ ಇರಿತ!
Views: 113
ಕನ್ನಡ ಕರಾವಳಿ ಸುದ್ದಿ: ಕಾಲೇಜಿನ ವಿದ್ಯಾರ್ಥಿಗಳಾದ ಹೇಮಂತ್ (19 ವ) ಮತ್ತು ಓರ್ವ ಅಪ್ರಾಪ್ತ ವಿದ್ಯಾರ್ಥಿ ಮೊದಲಿನಿಂದಲೂ ಗೆಳೆಯರಾಗಿದ್ದರು. ಆದರೆ, ಬುಧವಾರ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಈ ವೇಳೆ ಆವೇಶಕ್ಕೊಳಗಾದ ಹೇಮಂತ್, ತನ್ನ ಬಳಿಯಿದ್ದ ಪೆನ್ ಚಾಕುವಿನಿಂದ ಸಹಪಾಠಿಯ ಬೆನ್ನಿನ ಭಾಗಕ್ಕೆ ಇರಿದಿದ್ದಾನೆ.
ಜಗಳವನ್ನು ತಡೆಯಲು ಮುಂದಾದ ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿಗೂ ಈ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸರು ಆರೋಪಿ ಹೇಮಂತ್‌ನನ್ನು ವಶಕ್ಕೆ ಪಡೆದಿದ ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






