ಕ್ರೀಡೆ

ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢಶಾಲೆ:ಖೋ-  ಖೋ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ 

Views: 0

ಕುಂದಾಪುರ: ಸರಕಾರಿ ಪ್ರೌಢಶಾಲೆ, ಆರ್ಡಿಯಲ್ಲಿ ಇಲ್ಲಿ ಇತ್ತೀಚೆಗೆ ಜರುಗಿದ ಕುಂದಾಪುರ ವಲಯ ಮಟ್ಟದ ಖೋ – ಖೋ ಪಂದ್ಯಾಟದಲ್ಲಿ ರಾಮ್ಸನ್ ಸರಕಾರಿ ಪ್ರೌಢಶಾಲೆ, ಕಂಡ್ಲೂರು ಇಲ್ಲಿಯ ಹುಡುಗರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಭಟ್‌ರವರ ಮಾರ್ಗದರ್ಶನದಲ್ಲಿ, ಶ್ರೀ ನಿತ್ಯಾನಂದ ಶೆಟ್ಟಿ ಹಳನಾಡು ಇವರು ತಂಡದ ವ್ಯವಸ್ಥಾಪನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅಣ್ಣಪ್ಪ ಎಂ. ಗೌಡ ತರಬೇತಿಯನ್ನು ನೀಡಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಪರವಾಗಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು.

Related Articles

Back to top button
error: Content is protected !!