ಆರೋಗ್ಯ

ಒಂದಲ್ಲ, ಎರಡಲ್ಲ ಬರೋಬ್ಬರಿ 6 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

Views: 111

ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಮಕ್ಕಳಿಗೆ ಪವಾಡ ಎನ್ನುವಂತೆ ಜನ್ಮ ನೀಡಿದ್ದು ಮಕ್ಕಳೆಲ್ಲರೂ  ಆರೋಗ್ಯದಿಂದಿದ್ದಾರೆ. ಇದರಲ್ಲಿ 4 ಗಂಡು, 2 ಹೆಣ್ಣು ಮಕ್ಕಳು ಸೇರಿವೆ.

ಪಾಕಿಸ್ತಾನದ ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ 27 ವರ್ಷದ ಜೀನತ್ ವಹೀದ್ ಅವರು ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಟೆಯ ಅವಧಿಯಲ್ಲಿ ಎಲ್ಲ ಮಕ್ಕಳಿಗೆ ಒಂದರ ನಂತರ ಒಂದರಂತೆ ಜೀನತ್ ಜನ್ಮ ನೀಡಿದಳು. ತಾಯಿ ಸೇರಿದಂತೆ ಎಲ್ಲ ಶಿಶುಗಳು ಉತ್ತಮ ಆರೋಗ್ಯ ಹೊಂದಿದ್ದು ಮತ್ತು ಅವರೆಲ್ಲರೂ ಕಡಿಮೆ ತೂಕ ಹೊಂದಿದ್ದಾರೆ. ಆದರೆ ಬೆಳೆದಂತೆ ಸರಿ ಹೋಗ್ತಾರೆ. ಮನೆಯಲ್ಲಿ ಲಾಲನೆ, ಪಾಲನೆ ಸರಿಯಾಗಿ ಆದರೆ ತೂಕ ಸರಿದೂಗಿಸಿಕೊಳ್ಳಬಹುದು. ಸದ್ಯ ಶಿಶುಗಳನ್ನು ಆಸ್ಪತ್ರೆಯ ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದ್ದು, ಮಕ್ಕಳಿಗೆ ಮತ್ತು ತಾಯಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

.

Related Articles

Back to top button