ಸಾಂಸ್ಕೃತಿಕ

ಉಡುಪಿ: 170 ಗಂಟೆಗೂ ಅಧಿಕ ಅವಧಿಯವರೆಗೆ ಭರತನಾಟ್ಯ ಮಾಡಿ ರೆಮೋನಾ ದಾಖಲೆ ಮುರಿದ ದೀಕ್ಷಾ 

Views: 68

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ ಅವರು 7 ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ 170 ಗಂಟೆಗಳ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದ ರೆಮೋನಾ ಅವರ ದಾಖಲೆಯನ್ನು ಮೀರಿಸಿದ್ದಾರೆ.

ವಿದುಷಿ ದೀಕ್ಷಾ ವಿ ಅವರು ಅಜ್ಜರಕಾಡಿನ ಡಾ. ಜಿ. ಶಂಕರ ಮಹಿಳಾ ಕಾಲೇಜಿನ ಪಿಜಿ ಸಭಾಭವನದಲ್ಲಿ ವಿಶ್ವ ದಾಖಲೆಗಾಗಿ ಭರತನಾಟ್ಯ ಪ್ರದರ್ಶನ ನೀಡಿದ್ದು, ಗುರುವಾರ ಸಂಜೆ 5.30ಕ್ಕೆ 170 ಗಂಟೆಗಳ ಗಡಿ ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

 

Related Articles

Back to top button