ಕರಾವಳಿ

ಉಡುಪಿ ಹೊಸ ವರ್ಷಾಚರಣೆ: ಅಹಿತಕರ ಘಟನೆ ತಡೆಗೆ ಕ್ರಮ

Views: 17

ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಯ ಹಿಂದಿನ ದಿನ ಡಿಸೆಂಬರ್ 31ರ ರಾತ್ರಿ 12:30 ರವರೆಗೆ ಸಮಯ ಅವಕಾಶ ನಿಗದಿಪಡಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅನುಮತಿ ಪಡೆದುಕೊಂಡವರು ರಾತ್ರಿ 10 ಗಂಟೆಯೊಳಗೆ ಸ್ಪೀಕರ್ ಗಳನ್ನು ಬಂದ್ ಮಾಡಬೇಕಾಗಿದೆ.

ಸಮುದ್ರತೀರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಗ್ರಹರಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್.ಕೆ ತಿಳಿಸಿದ್ದಾರೆ.

ಪರಿಸರದಲ್ಲಿ ಅಹಿತಕರ ಘಟನೆಗಳು ನಡೆದರೆ 112 ಗೆ ಕರೆ ಮಾಡಿದರೆ ಪೊಲೀಸರು ತತ್ ಕ್ಷಣ ಸ್ಪಂದಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ನೈತಿಕ ಪೊಲೀಸ್ ಗಿರಿ ತಡೆಯುವ ಉದ್ದೇಶದಿಂದ ಪೊಲೀಸರ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.ಯಾವುದಾದರೂ ಸಮಸ್ಯೆಗಳು ಬಂದಾಗ ನೇರವಾಗಿ ಕಾನೂನು ಕೈಗೊತ್ತಿಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಬೇಕು.

ಡ್ರಗ್ಸ್, ರೇವ್ ಪಾರ್ಟಿ, ಅಪಾರ್ಟ್ಮೆಂಟ್, ಹೋಂ ಸ್ಟೇ, ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಪೊಲೀಸರ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

Related Articles

Back to top button