ಕರಾವಳಿ
ಉಡುಪಿ ಸೈಂಟ್ ಮೇರಿಸ್ ದ್ವೀಪದ ಬಳಿ ಭಾರತೀಯ ಜಲಪ್ರದೇಶ ಅಕ್ರಮ ಪ್ರವೇಶ: ಮೂವರು ಮೀನುಗಾರರ ಅರೆಸ್ಟ್

Views: 87
ಕನ್ನಡ ಕರಾವಳಿ ಸುದ್ದಿ: ಉಡುಪಿ ಸೈಂಟ್ ಮೇರಿಸ್ ದ್ವೀಪದ ಬಳಿ ಭಾರತೀಯ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಮೂವರು ಮೀನುಗಾರನ್ನು ಕರಾವಳಿ ಭದ್ರತಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಜೇಮ್ಸ್ ಫ್ರಾಂಕ್ಲಿನ್ ಮೋಸೆನ್ (50), ರಾಬಿನ್ ಸ್ಪನ್ (50) ಹಾಗೂ ಡೆರೋಸ್ ಅಲ್ಲೋನ್ಫೋ (38) ಎಂದು ಗುರುತಿಸಲಾಗಿದೆ.
ಇವರು ಫೆ.17ರಂದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಒಮಾನ್ ಡುಕ್ಟ್ ಬಂದರಿನಿಂದ ಹೊರಟ್ಟಿದ್ದರು. ಅಲ್ಲದೇ ಈ ಬಗ್ಗೆ ಮಲ್ಪೆ ಸಮೀಪದ ಸ್ಥಳೀಯ ಮೀನುಗಾರರು ಕರಾವಳಿ ಭದ್ರತಾ ಪೊಲೀಸರಿಗೆ ದೂರು ನೀಡಿದ್ದಾರೆ.ಅಕ್ರಮವಾಗಿ ಭಾರತೀಯ ಜಲಪ್ರದೇಶವನ್ನು ಪ್ರವೇಶಿಸಿದ್ದ ಮೂವರು ಮೀನುಗಾರರನ್ನು ಬಂಧಿಸಲಾಗಿದೆ.
ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.