ಉಡುಪಿ: ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಯುವಕ ಆತ್ಮಹತ್ಯೆ
Views: 112
ಕನ್ನಡ ಕರಾವಳಿ ಸುದ್ದಿ: ಪ್ರಿಯತಮೆಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕುಂಜಿಬೆಟ್ಟು ನಿವಾಸಿ ರಾಜು ಅವರ ಪುತ್ರ ರಂಜಿತ್ (28) ಮೃತರು. ಜ.29ರಂದು ರಂಜಿತ್ ಅವರು ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾ ಡಿದ್ದರು. ಅನಂತರ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ ಎಂಬುವರ ಜತೆ ಫೋನಿನಲ್ಲಿ ಮಾತನಾಡುತ್ತಾ ತನ್ನ ರೂಮಿನೊಳಗೆ ಹೋಗಿದ್ದರು. ರಾತ್ರಿ ವೇಳೆ, ಮನೆಯ ವಾಟರ್ ಟ್ಯಾಂಕ್‌ನ ನೀರು ತುಂಬಿ ಕೆಳಗೆ ಬೀಳುತ್ತಿದ್ದುದರಿಂದ ಅವರ ತಂದೆ ವಾಟರ್ ಟ್ಯಾಂಕಿನ ವಾಲ್ ಅನ್ನು ಆಫ್ ಮಾಡಲು ಹೋಗುವಾಗ ರಂಜಿತ್ ಅವರ ರೂಮಿನ ಕಿಟಕಿ ತೆರೆದಿದ್ದು, ಅದರತ್ತ ಹೋಗಿ ನೋಡಿದಾಗ ಆತ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದ. ಕೂಡಲೇ ಆತನನ್ನು ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಆತನಿಗೆ 20 ನಿಮಿಷ ಶೂಶ್ರುಷೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಾವಿನಲ್ಲಿ ಸಂಶ ಯವಿರುವುದಾಗಿ ಆತನ ಅಣ್ಣ ರಕ್ಷಿತ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.






