ಕರಾವಳಿ
ಉಡುಪಿ:ರಿಕ್ಷಾ ಪಲ್ಟಿಯಾಗಿ ಬಿದ್ದು ಪಾದಚಾರಿ ಸಾವು

Views: 93
ಉಡುಪಿ:ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಬಡಗುಬೆಟ್ಟು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ತಿರುವಿನಲ್ಲಿ ಕಾರು ಮತ್ತು ರಕ್ಷಾ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪಾದಚಾರಿಯ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಪಾದಾಚಾರಿ ಸಾವನಪ್ಪಿದ್ದಾರೆ.
ಎಂಐಟಿಯ ನಿವೃತ್ತ ಉದ್ಯೋಗಿ ಅಶೋಕ್ ಶೆಟ್ಟಿಗಾರ್( 64) ಮೃತಪಟ್ಟವರು.
ಅಪಘಾತದ ಕಾರಣ ತಲೆಗೆ ಗಂಭೀರವಾಗಿ ಏಟಾಗಿ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ.