ಯುವಜನ
ಉಡುಪಿ:ಉದ್ಯೋಗದ ಸಂದರ್ಶನಕ್ಕೆ ಹೋದ ಎಂಜಿನಿಯರಿಂಗ್ ಪದವೀಧರ ನಾಪತ್ತೆ

Views: 68
ಉಡುಪಿ: ಕಡೆಕಾರು ಗ್ರಾಮದ ಮನೋಜ್ (33) ಉದ್ಯೋಗದ ಸಂದರ್ಶನಕ್ಕೆಂದು ಮನೆಯಿಂದ ಹೋದ ಎಂಜಿನಿಯರಿಂಗ್ ಪದವೀಧರ ನಾಪತ್ತೆಯಾಗಿದ್ದಾರೆ.
ಎಂಜಿನಿಯರಿಂಗ್ ಪದವೀಧರರಾಗಿರುವ ಅವರು ಸರಿಯಾದ ಉದ್ಯೋಗ ಲಭಿಸದೆ ಮನೆಯಲ್ಲೇ ಇರುತ್ತಿದ್ದರು. ಅ. 9ರಂದು ಹೋದವರು ಸಂಜೆಯಾದರೂ ಮನೆಗೆ ಬಂದಿಲ್ಲ. ಮೊಬೈಲ್ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ ಎನ್ನುವ ಸಂದೇಶ ಬರುತ್ತಿದೆ ಎಂದು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






