ರಾಜಕೀಯ

ಉಚ್ಚಾಟಿತ ಶಾಸಕರಾದ ಎಸ್‌ಟಿ ಸೋಮಶೇಖರ್, ಹೆಬ್ಬಾರ್ ಬೆಂಬಲದಿಂದ 5ನೇ ಅಭ್ಯರ್ಥಿ ಗೆಲ್ಲಿಸುವ ಹುಮ್ಮಸ್ಸಿನಲ್ಲಿ ಸಿಎಂ ಡಿಕೆಶಿ 

Views: 26

ಕನ್ನಡ ಕರಾವಳಿ ಸುದ್ದಿ:  ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೈವೋಲ್ಟೇಜ್ ಬ್ಯಾಟಲ್‌ಗೆ ವೇದಿಕೆ ಸಜ್ಜಾಗಿದೆ.ಇಂದು ನಡೆಯಲಿರುವ ವಿಧಾನ ಪರಿಷತ್‌ನ 7 ಸ್ಥಾನಗಳ ಚುನಾವಣೆಗೆ ಇದೀಗ ಕಣ ರಂಗೇರಿದೆ.7 ಸೀಟುಗಳಿಗೆ ಒಟ್ಟು 8 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ

ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಸದ್ಯ ಮೂರು ಮತಗಳ ಕೊರತೆ ಎದುರಾಗಿದೆ. ಹೀಗಾಗಿಯೇ ಜೆಡಿಎಸ್ ನಾಯಕರು ಯತ್ನಾಳ್ ಸೇರಿ ಇತರೆ ಅಸಮಾಧಾನಿತ ಶಾಸಕರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ. ದೋಸ್ತಿ ಪಕ್ಷದ ಅಭ್ಯರ್ಥಿಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಬಿಜೆಪಿ ಒಳಗೊಳಗೇ ತಂತ್ರ ರೂಪಿಸುತ್ತಿದೆ.ಮೂರೂ ಪಕ್ಷಗಳ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಅಂತಿಮ ವೀಪ್ ಮತ್ತು ಮತದಾನದ ತಂತ್ರಗಾರಿಕೆ ಸಿದ್ದವಾಗಲಿದ್ದು, ಹೈವೋಲ್ಟೇಜ್ ಕದನದಲ್ಲಿ ಯಾರು ನಗುತ್ತಾರೆ, ಯಾರಿಗೆ ಶಾಕ್ ಕಾದಿದೆ ಅನ್ನೋದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಅಭ್ಯರ್ಥಿಗಳಾಗಿ ಬಿಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿವಿ ಮೋಹನ್, ಶಿವಣ್ಣ ಕಣದಲ್ಲಿದ್ದಾರೆ. ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅಖಾಡದಲ್ಲಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು ಜೆಡಿಎಸ್ ನಿಂದ ಗೋವಿಂದರಾಜು ಅವರು ಕಣದಲ್ಲಿದ್ದಾರೆ.

ಬಲಾಬಲ ಹೇಗಿದೆ?

ಒಟ್ಟು ಶಾಸಕರ ಸಂಖ್ಯೆ -222 ( ಸುಧಾಕರ್ ನಿಧನ ಹಾಗೂ ವಿಜಯ್ ಕುಲಕರ್ಣಿ ಶಾಸಕತ್ವ ಅನರ್ಹ)

ಕಾಂಗ್ರೆಸ್ – 135, ಬಿಜೆಪಿ- 62, ಜೆಡಿಎಸ್- 18, ಪಕ್ಷೇತರ- 2,ಸರ್ವೋದಯ ಕರ್ನಾಟಕ ಪಕ್ಷ- 1, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ -1, ಬಿಜೆಪಿ ಉಚ್ಚಾಟಿತರು – 3

ಯಾರಿಗೆ ಗೆಲ್ಲಲು ಎಷ್ಟು ಸಂಖ್ಯೆ?

ವಿಧಾನಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಬೇಕಾದ ಮತಗಳು 28. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಗೆಲ್ಲಿಸಲು 140 ಮತಗಳು ಬೇಕಾಗಿವೆ. ಅದರೆ ಕಾಂಗ್ರೆಸ್ ಬಳಿ ಇರುವ ಸಂಖ್ಯೆ 135. ಇದರ ಜೊತೆಗೆ ಎರಡು ಪಕ್ಷೇತರ ಶಾಸಕರು, 1 ಸರ್ವೋದಯ ಪಕ್ಷದ ಶಾಸಕರ ಬೆಂಬಲದಿಂದ 138 ಆಗಲಿದೆ. ಇದೇ ಸಂದರ್ಭದಲ್ಲಿ ಇಬ್ಬರು ಉಚ್ಚಾಟಿತ ಶಾಸಕರಾದ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಬೆಂಬಲದಿಂದ 140 ಆಗಲಿದೆ. ಹಾಗಾಗಿ ಐದನೇ ಅಭ್ಯರ್ಥಿಯನ್ನು ಗೆಲ್ಲಿಸುವ ಹುಮ್ಮಸ್ಸಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಇದ್ದಾರೆ.

ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ಒಟ್ಟು 62 ಶಾಸಕರು ತಲಾ 28 ಮತಗಳನ್ನು ಹಾಕಿದರೆ ಇಬ್ಬರ ಗೆಲುವು ನಿರಾಯಸವಾಗಲಿದೆ. ಬಿಜೆಪಿಗೆ ಬೇಕಾಗಿದ್ದು ಬಿಜೆಪಿಗೆ 56 ಮತಗಳು. ಉಳಿದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕಲಾಗುತ್ತದೆ. ಜೆಡಿಎಸ್ ನಲ್ಲಿ 18 ಶಾಸಕರು ಇದ್ದು ಬಿಜೆಪಿಯಿಂದ 6 ಮತಗಳು ಬಂದರೆ 24 ಮತಗಳಾಗುತ್ತಿವೆ. ಆದರೆ 28 ಮತಗಳು ಗೆಲ್ಲಲು ಬೇಕಾಗಿದೆ. ಬಿಜೆಪಿಯ 6 ಮತ ಜೊತೆಗೆ ಜನಾರ್ದನ ರೆಡ್ಡಿ ಹಾಗೂ ಮೂವರು ಉಚ್ಚಾಟಿತರ ಬೆಂಬಲ ಸಿಕ್ಕರೆ ಗೆಲುವು ಸಾಧ್ಯವಾಗಲಿದೆ.

 

 

Related Articles

Back to top button
error: Content is protected !!