ಸಾಂಸ್ಕೃತಿಕ

ಈ ಕಾರಣಕ್ಕೆ ನಿವೇದಿತಾ ಗೌಡಗೆ ಡಿವೋರ್ಸ್‌..! ಕೊನೆಗೂ ಸತ್ಯ ಬಿಚ್ಚಿಟ್ಟ ಚಂದನ್‌ ಶೆಟ್ಟಿ

Views: 337

ಕನ್ನಡ ಕರಾವಳಿ ಸುದ್ದಿ: ಬಿಗ್‌ಬಾಸ್‌ನಲ್ಲಿ ಗಮನ ಸೆಳೆದಿದ್ದ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಅವರನ್ನು ಮದುವೆ ಆಗಿದ್ದರು. ಆದರೆ ಈ ಮುದ್ದಾದ ಜೋಡಿ ಇದ್ದಕ್ಕಿದ್ದಂತೆ ಡಿವೋರ್ಸ್‌ ಪಡೆದು ಎಲ್ಲರಿಗೂ ಶಾಕ್‌ ಕೂಡ ನೀಡಿತ್ತು.ಆದರೆ ಡಿವೋರ್ಸ್‌ಗೆ ಕಾರಣವೇನು? ಎಂದು ಮೊದಲಿಗೆ ಹೇಳಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಚಂದನ್‌ ಶೆಟ್ಟಿ ತಮ್ಮ ಡಿವೋರ್ಸ್‌ಗೆ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

‘ನಾವು ಡಿವೋರ್ಸ್‌ ಪಡೆಯಬೇಕು ಎಂಬ ನಿರ್ಧಾರಕ್ಕೆ ಬಂದಾಗ ನಾನು-ನಿವೇದಿತಾ ನಾಲ್ಕು ವರ್ಷ ಜೊತೆಯಲ್ಲಿದ್ವಿ. ಮೂರು ವರ್ಷ ಇರುವಾಗಲೇ ನಮ್ಮಿಬ್ಬರ ನಡುವೆ ಎಷ್ಟೋ ವಿಚಾರಗಳು ಸೆಟ್‌ ಆಗುತ್ತಿರಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರೂ ಹೇಳುವಂತೆ ಖುಷಿ ಖುಷಿಯಾದ ಕಪಲ್‌ ಅನ್ನೋದು ಅಲ್ಲಿಗೆ ಮಾತ್ರ ಸೀಮಿತವಾಗಿತ್ತು. ಈ ವಿಚಾರವಾಗಿ ನಿವೇದಿತಾ ರನ್ನು ಬ್ಲೇಮ್‌ ಮಾಡಲು ಇಷ್ಟಪಡಲ್ಲ’ ಎಂದು ಸುವರ್ಣ ನ್ಯೂಸ್‌ನ ಬೆಂಗಳೂರು ಬಝ್‌ ಪಾಡ್‌ಕಾಸ್ಟ್‌ನಲ್ಲಿ ಚಂದನ್‌ ಹೇಳಿದ್ದಾರೆ.ನಿವೇದಿತಾ ಕೂಡ ಇನ್ನೂ ಚಿಕ್ಕವಳು, ಆಕೆಗೂ ಇನ್ನೂ ದೊಡ್ಡ ಲೈಫ್‌ ಇದೆ. ಇನ್ನೂ ಸಾಧನೆ ಮಾಡುವಂತದ್ದು ಇದೆ. ಹಾಗಾಗಿ ಈ ಕೆಸರೆರಚಾಟದಲ್ಲಿ ನಮಗೆ ಮಾತ್ರವೇ ಗಲೀಜಾಗೋದು ಅನ್ನೋದು ಗೊತ್ತಿತ್ತು. ಈಗಾಗಲೇ ಡಿವೋರ್ಸ್‌ ಪಡೆದವರ ಬಗ್ಗೆಯೂ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಇಬ್ಬರೂ ಈ ವಿಚಾರದಲ್ಲಿ ಕ್ಲಾರಿಟಿಯಲ್ಲಿದ್ವಿ’ ಎಂದಿದ್ದಾರೆ.‘ನನ್ನ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮದೇ ಆದ ಬದುಕುವ ಸ್ವಾತಂತ್ರ್ಯವಿದೆ. ನನಗೆ ಇಷ್ಟವಾಗದ ಕೆಲಸ ಮಾಡಿದಾಗ ನಾನು ಅದಕ್ಕೆ ಅಡ್ಡಿ ಮಾಡುವವನಲ್ಲ. ಅದೇ ಸ್ವಾತಂತ್ರವ್ಯವನ್ನು ನಾನೂ ಕೂಡ ನಿರೀಕ್ಷಿಸುತ್ತೇನೆ. ನಮ್ಮಿಬ್ಬರ ನಡುವೆಯೂ ಇದೇ ಆಗಿದ್ದು. ಹಾಗಾಗಿ ಇಬ್ಬರೂ ಕೂತು ಮಾತನಾಡಿದ್ವಿ, ಇದನ್ನ ಮುಂದೆ ಹೇಗೆ ಹ್ಯಾಂಡಲ್‌ ಮಾಡಬೇಕು ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡ್ವಿ. ನಾವು ಅಧಿಕೃತವಾಗಿ ಡಿವೋರ್ಸ್‌ ಪಡೆದ ಮೇಲೂ ಒಂದು ದಿನ ಜೊತೆಯಲ್ಲಿದ್ವಿ. ಸುದೀರ್ಘವಾಗಿ ಚರ್ಚಿಸಿ ನಂತರ ಪ್ರೆಸ್‌ಮೀಟ್‌ ಮಾಡಿದ್ವಿ’ ಎಂದು ವಿವರಿಸಿದ್ದಾರೆ.‘ನಮ್ಮಿಬ್ಬರ ಲೈಫ್‌ಸ್ಟೈಲ್‌ ತುಂಬಾ ಭಿನ್ನವಾಗಿತ್ತು. ನಾನು ತುಂಬಾ ಸಿಂಪಲ್‌, ನಿವೇದಿತಾ ತುಂಬಾ ಪಾಶ್‌ ಹುಡುಗಿ. ಆದರೆ ನಾನು ಹಾಗಲ್ಲ, ರಸ್ತೆಬದಿಯಲ್ಲೂ ನಾನು ಊಟ ಮಾಡ್ತೀನಿ. ಹಾಗಾಗಿ ನಮ್ಮಿಬ್ಬರ ನಡುವೆ ಲೈಫ್‌ಸ್ಟೈಲ್‌ ಹೊಂದಾಣಿಕೆ ಆಗುತ್ತಿರಲಿಲ್ಲ. ನಾನು ಮೊದಲ ದಿನದಿಂದ ಡಿವೋರ್ಸ್‌ ಆಗುವವರೆಗೂ ನಿವೇದಿತಾಗೆ ಸಪೋರ್ಟ್‌ ಮಾಡುತ್ತಾ ಬಂದಿದ್ದೆ. ಅವಳಿಗೆ ಏನು ಇಷ್ಟವೋ ಹಾಗೆಯೇ ಬಿಟ್ಟಿದ್ದೆ. ನನ್ನ ನಾನು ಮರೆತುಬಿಟ್ಟಿದ್ದೆ. ನನ್ನ ಪಾರ್ಟ್‌ನರ್‌ನ ಖುಷಿಯಾಗಿಡಬೇಕು ಎನ್ನುವ ಚೌಕಟ್ಟಿನಲ್ಲೇ ಇದ್ದೆ. ಆದರೆ ಎಷ್ಟು ಕಷ್ಟಪಟ್ಟರೂ ಅದು ವರ್ಕೌಟ್‌ ಆಗಲಿಲ್ಲ ಅಂದಾಗ ದೂರ ಆಗಬೇಕು ಎನ್ನುವ ನಿರ್ಧಾರ ಮಾಡಿದ್ದು’ ಎಂದಿದ್ದಾರೆ.ಆ ಮೇಲೆ ನಾನು ತುಂಬಾ ಸ್ಟ್ರಾಂಗ್‌ ಆಗಿ ಕಂಬ್ಯಾಕ್‌ ಆಗಬೇಕು ಎಂದು ನಿರ್ಧರಿಸಿದೆ. ನನಗೆ ಬರುತ್ತಿದ್ದ ಕಾಮೆಂಟ್‌ಗಳಲ್ಲೂ ಬಹುತೇಕರು ನಮಗೆ ಮದುವೆಗೂ ಮುಂಚೆ ಇದ್ದ ಚಂದನ್‌ ಶೆಟ್ಟಿ ಬೇಕು ಅಂತಿದ್ರು. ಮದುವೆಯಾಗಿ ನಾಲ್ಕು ವರ್ಷವೂ ನಾನು ಅದೇ ಕಾಮೆಂಟ್‌ ನೋಡಿದ್ದೀನಿ. ನಮ್ಮತ್ರ ಏನೂ ಇರಲಿಲ್ಲ, ಊಟಕ್ಕೂ ಕಷ್ಟ ಇತ್ತು. ಈಗ ದುಡೀತಿದೀನಿ. ನನ್ನತ್ರ ಹಣ, ಕಾರು, ಮನೆ ಎಲ್ಲವೂ ಇದೆ. ಆದರೆ ಮೊದಲಿದ್ದ ಮೋಟಿವೇಶನ್‌ ನನ್ನಲ್ಲಿ ಇರಲಿಲ್ಲ. ಈಗಲೂ ಹಳೆಯ ದಿನಗಳು ಆಗಾಗ ನೆನಪಾಗುತ್ತೆ. ತಿಂಗಳಲ್ಲಿ ಒಂದೆರಡು ದಿನ ನನಗೆ ಪಾರ್ಟ್‌ನರ್‌ ಬೇಕು ಅನಿಸುತ್ತೆ. ಇನ್ನು ಬಾಕಿ ದಿನಗಳು ಒಬ್ಬನೇ ಇರೋದು ಖುಷಿ ಅನಿಸುತ್ತೆ. ಸದ್ಯಕ್ಕೆ ನನಗೆ ಫ್ರೆಂಡ್ಸ್‌ ಇದ್ದಾರೆ. ಯಾರೊಂದಿಗೂ ನಾನು ಕಮಿಟ್‌ ಆಗಿಲ್ಲ’ ಎಂದು ಚಂದನ್‌ ಎಂದು ಸತ್ಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

Related Articles

Back to top button