ರಾಜಕೀಯ

ಇಂದು ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅರ್ಜಿ ವಿಚಾರಣೆ

Views: 22

ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರೋ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.

ದೂರುದಾರ ಪರ ವಕೀಲರು ಇಂದು ವಾದ ಮಾಡಿದರೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಇದಲ್ಲದೇ, ಸೆಪ್ಟೆಂಬರ್ 12ರಂದು ಕೂಡ ವಾದ ಸರಣಿ ಮುಂದುವರೆಯಲಿದೆ. ಅಂದು ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.

ಇದರ ನಡುವೆ ಬಹಿರಂಗವಾಗಿಯೇ ಕೆಲವರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಮಾಡುತ್ತಿರುವುದು ರಾಜಕೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಅವರ ನಡುವೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಬಹಿರಂಗ ವಾಗ್ವಾದಗಳು ನಡೆದಿವೆ.

ಮುಡಾ ಹಗರಣ ಸಂಬಂಧ ಇಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಸದ್ಯ ಇದು ಸಿಎಂ ತಲೆಬಿಸಿಗೆ ಕಾರಣವಾಗಿದೆ. ಸೆಪ್ಟೆಂಬರ್ 12ರಂದು ಅಭಿಷೇಕ್ ಮನು ಸಿಂಘ್ವಿ ಕೂಡ ವಾದ ಮಂಡಿಸಲಿದ್ದಾರೆ. ಈ ಎಲ್ಲಾ ವಾದ-ಪ್ರತಿವಾದದ ಮೇಲೆ ಸಿದ್ದು ಕುರ್ಚಿ ಹಾಗೂ ಅವರ ಭವಿಷ್ಯ ನಿಂತಿದೆ.

Related Articles

Back to top button
error: Content is protected !!