ಆರೋಗ್ಯ
ಇಂದು ವಿಶ್ವ ಪರಿಸರ ದಿನಾಚರಣೆ

Views: 0
ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಈ ದಿನ ಪರಿಸರ ಸಂರಕ್ಷಣೆ ಜಾಗೃತಿ ಮತ್ತು ಕೈಗೊಳ್ಳಬೇಕಾದ ಕ್ರಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ನಾವು ಮತ್ತು ಸುತ್ತ ಮುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ, ಪರಿಸರ ಹಾಳಾಗದಂತೆ ಕಾಳಜಿ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನೀರು ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಸುಸ್ಥಿರ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿದೆ, ಪೃಕೃತಿಯನ್ನು ಲಘವಾಗಿ ತೆಗೆದುಕೊಳ್ಳಬಾರದು ಎಂದು ನೆನಪಿಸಲು ವಿಶ್ವ ಸಂಸ್ಥೆಯ ಪ್ರಕಾರ ಪರಿಸರ ಜಾಗೃತಿ ಬಗ್ಗೆ ಆಚರಿಸಲಾಗುತ್ತದೆ.
“ಒಂದೇ ಭೂಮಿ” ಪೃಕೃತಿಯೊಂದಿಗೆ ಸಾಮರಸ್ಯದಿಂದ ಸ್ವಚ್ಚ, ಹಸಿರು ಮತ್ತು ಸುಸ್ಥಿರ ಜೀವನವನ್ನು ಸಕ್ರೀಯಗೊಳಿಸಲು ಹಸಿರು ಜೀವನ ಶೈಲಿಗೆ ಬದಲಾಯಿಸುವ ನಮ್ಮ ಸಾಧ್ಯತೆಗಳ ಮೇಲೆ ಕೇಂದ್ರಿಕರಿಸುತ್ತದೆ.
ಪರಿಸರ ವಿನಾಶವನ್ನು ತಡೆಗಟ್ಟಬೇಕು. ಪ್ರತಿಯೊಬ್ಬರು ದೈನಂದಿನ ಕೆಲಸದೊಂದಿಗೆ ಪೃಕೃತಿ ಉಳಿವಿನೆಡೆಗೆ ಹೆಜ್ಜೆ ಇಡೋಣ