ಸಾಂಸ್ಕೃತಿಕ

ಆರಿ ಎಂಬ್ರಾಯ್ಡರಿ ತರಬೇತಿ ಉದ್ಘಾಟನೆ

Views: 80

ಕನ್ನಡ ಕರಾವಳಿ ಸುದ್ದಿ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಗ್ರಾಮ ಪಂಚಾಯತ್ ಕೋಟೇಶ್ವರ, ಕೋಟಿಲಿಂಗೇಶ್ವರ ಸಂಜೀವಿನಿ ಒಕ್ಕೂಟ ಇವರ ಆಯೋಜನೆಯಲ್ಲಿ 7 ದಿನಗಳ ಆಲಿ ಎಂಬ್ರಾಯ್ಡರಿ ತರಬೇತಿಯ ಉದ್ಘಾಟನೆ ರೋಟರಿ ಸಭಾಂಗಣ ಕೋಟೇಶ್ವರದಲ್ಲಿ ನೆರವೇರಿತು. ತರಬೇತಿಯ ಉದ್ಘಾಟನೆಯನ್ನು ವಿಜಯ ಗ್ರಾಮೀಣ ಪ್ರತಿಷ್ಠಾನ ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಉದ್ಘಾಟಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಕೋಟೇಶ್ವರ ಗ್ರಾಮ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಗಿಣಿ, ಶ್ರೀ ಕೋಟಿಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನ್ವಿತಾ ಎಸ್ ರಾವ್ ಭಾರತೀಯ ವಿಕಾಸ ಟ್ರಸ್ಟ್ ನಾ ರಾಘವೇಂದ್ರ ಆಚಾರ್ಯ ಕೆದೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯಕ್ ರೋಟರಿ ಕ್ಲಬ್ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಕೋಟೇಶ್ವರ ಬ್ರಾಂಚ್ ಮ್ಯಾನೇಜರ್ ಚಂದ್ರಶೇಖರ್, ತರಬೇತುದಾರೆ ಶ್ರೀಮತಿ ಭಾರತಿ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.

ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು. ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಮಿತ್ರಾ ಪ್ರಾರ್ಥಿಸಿ,ಉಷಾ ವಂದಿಸಿ, ಶ್ವೇತಾ ನಿರೂಪಿಸಿದರು.ಒಟ್ಟು 30 ಮಂದಿ ಫಲಾನುಭವಿಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Related Articles

Back to top button
error: Content is protected !!