ಅಮೆರಿಕಾದ ವೀಸಾ ಸಿಗಲಿಲ್ಲ ಎಂದು ನೊಂದ ವೈದ್ಯೆ ಆತ್ಮಹತ್ಯೆ
Views: 123
ಕನ್ನಡ ಕರಾವಳಿ ಸುದ್ದಿ: ಅಮೆರಿಕಾದ ವೀಸಾ ಸಿಗಲಿಲ್ಲ ಎಂದ ನೊಂದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ರೋಹಿಣಿ ಎಂಬ ವೈದ್ಯೆ ಅಮೆರಿಕಾದ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೇ ವೀಸಾ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ನೊಂದು ಖಿನ್ನತೆಗೊಳಗಾಗಿದ್ದರು. ಹೈದರಾಬಾದ್ ನ ಪದ್ಮರಾವ್ ನಗರದ ಅಪಾರ್ಟ್ ಮೆಂಟ್ ನಲ್ಲಿ ಹೆಚ್ಚಿನ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆ ಕೆಲಸದ ಮಹಿಳೆ ಬೆಳಿಗ್ಗೆ ಬಂದು ಪ್ಲಾಟ್ ಬೆಲ್ ಮಾಡಿದಾಗ, ಮನೆ ಬಾಗಿಲು ತೆರೆದಿಲ್ಲ. ಆಗ ಮನೆ ಕೆಲಸದ ಮಹಿಳೆಯ ವೈದ್ಯೆಯ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಕುಟುಂಬ ಸದಸ್ಯರು ಬಂದು ನೋಡಿದಾಗ, ವೈದ್ಯೆಯಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಕೊನೆಗೆ ಪ್ಲಾಟ್ ನ ಡೋರ್ ಒಡೆದು ಒಳ ಹೋಗಿ ನೋಡಿದಾಗ, ವೈದ್ಯೆ ರೋಹಿಣಿ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ನವಂಬರ್ 21 ರಂದೇ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ನುಂಗಿರಬಹುದು ಇಲ್ಲವೇ ಸಾವನ್ನಪ್ಪಲು ಯಾವುದಾದರೂ ಇಂಜೆಕ್ಷನ್ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೇ, ಸಾವಿಗೆ ನಿಖರ ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ವರದಿಯ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ.
ವೈದ್ಯೆಯ ಪ್ಲಾಟ್ ನಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ . ಡೆತ್ ನೋಟ್ ನಲ್ಲಿ ವೈದ್ಯೆ ಖಿನ್ನತೆಯಿಂದ ಬಳಲುತ್ತಿರುವುದು ಉಲ್ಲೇಖವಾಗಿದೆ. ಜೊತೆಗೆ ವೀಸಾ ಅರ್ಜಿ ತಿರಸ್ಕಾರವೂ ಪ್ರಸ್ತಾಪವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶವದ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.






