ಅಮೃತ ಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣ ಫಲಕ ಅನಾವರಣ

Views: 0
ಕೋಟ : ಕೋಟ ವಿದ್ಯಾ ಸಂಘದ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಸ್ಥೆಗಳ ಅಮೃತಮಹೋತ್ಸವದ ಅಂಗವಾಗಿ ಅಮೃತಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣಾ ಫಲಕದಅನಾವರಣವು ಕಾಲೇಜಿನ ಮಹತ್ಮಾಗಾಂಧಿ ಸ್ಮಾರಕ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಭ್ಯಾಗತರಾಗಿ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿಯಾದ ಶ್ರೀ ಕೆ.ನರಸಿಂಹ ನಕ್ಷತ್ರಿ, ಸಹಕುಲಪತಿ ಭಾರತೀಯ ತಂತ್ರಜ್ಞಾನ ಹಾಗೂ ವಿಜ್ಞಾನ ಆವಿಷ್ಕಾರ ವಿಶ್ವವಿದ್ಯಾನಿಲಯ ಆಂದ್ರಪ್ರದೇಶ ಇವರು ಆಗಮಿಸಿ ಶೀರ್ಷಿಕೆ ಗೀತೆಯನ್ನು ಬಿಡುಗಡೆಗೊಳಿಸಿದರು.
ಅವರು ಮಾತನಾಡುತ್ತಾ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಶಿಸ್ತಿಗೆ ಆದ್ಯತೆಯನ್ನು ನೀಡಿದಲ್ಲಿ ಮುಂದಿನ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ವಿವೇಕ ವಿದ್ಯಾ ಸಂಸ್ಥೆ ತನ್ನನ್ನು ಸೇರಿಸಿಕೊಂಡಂತೆ ಅಸಂಖ್ಯಾತ ವಿದ್ಯಾರ್ಥಿಗಳ ಜೀವನದಲ್ಲಿ ಸಾಕ್ಷಾತ್ಕರಿಸಿ ಕೊಟ್ಟಿದೆ.
ಇನ್ನೋರ್ವ ಅಭ್ಯಾಗತರಾಗಿ ಕೋಟ ಸಿ.ಎ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ತಿಮ್ಮ ಪೂಜಾರಿಯವರು ಅಮೃತಮಹೋತ್ಸವದ
ಸಂಸ್ಮರಣ ಯೋಜನೆಗಳ ನಾಮಫಲಕವನ್ನು ಅನಾವರಣಗೊಳಿಸಿ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ವಿವೇಕ ವಿದ್ಯಾ ಸಂಸ್ಥೆಯ ಉದ್ದೇಶಿತ ಅಮೃತಮಹೋತ್ಸವದ ಯೋಜನೆಗಳೆಲ್ಲವೂ ಯಶಸ್ವಿಯಾಗಿ ಸಂಪನ್ನಗೊಳ್ಳಲ್ಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಟ ವಿದ್ಯಾಸಂಘದ ಅಧ್ಯಕ್ಷರಾದ ಪಿ. ಪ್ರಭಾಕರ ಮಯ್ಯರು ವಹಿಸಿ, ಮಾತನಾಡಿ
ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ, ಈ ಉತ್ಸವವು ಕೇವಲ ವಿದ್ಯಾಸಂಘಗಳಿಗೆ ಮಾತ್ರ ಸಿಮೀತವಾಗಿರದೆ , ಹಿಂದಿನ ವಿದ್ಯಾರ್ಥಿಗಳ, ಇಂದಿನ ವಿದ್ಯಾರ್ಥಿಗಳ , ಇಲ್ಲಿ ಸೇವೆ ಸಲ್ಲಿಸಿದವರ , ಸೇವೆ ಸಲ್ಲಿಸುತ್ತಿರುವವರ , ವಿದ್ಯಾಭಿಮಾನಿಗಳ ಮಾತ್ರವಲ್ಲಾ ಊರಿನ ಉತ್ಸವ ಆಗಬೇಕೆಂದು ತಿಳಿಸಿದರು.
ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಎಂ ರಾಮದೇವ ಐತಾಳರು ಶುಭಶಂಶನೆಗೈದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ .ಕೆ ಜಗದೀಶ ನಾವಡ ಸ್ವಾಗತಿಸಿದರು. ಬಾಲಕಿಯರ ಪ್ರೌಡ ಶಾಲೆಯ ಮುಖ್ಯೋಪಧ್ಯಾಯ ಶ್ರೀ ಕೆ ಜಗದೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು , ಅಮೃತಮಹೋತ್ಸವದ
ಸದಸ್ಯರು, ಹಿಂದಿನ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಧ್ಯಾಪಕರಾದ ಶ್ರೀ ನಾರಾಯಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.