ಪ್ರವಾಸೋದ್ಯಮ

ಅಡಿಗಾಸ್ ಯಾತ್ರಾ ಪ್ರವಾಸ ದರ್ಶನದ ಮಾಹಿತಿ ಕೈಪಿಡಿ ಧರ್ಮಸ್ಥಳದಲ್ಲಿ ಅನಾವರಣ

Views: 176

ಕನ್ನಡ ಕರಾವಳಿ ಸುದ್ದಿ:ವಿಶ್ವಾಸ ಮತ್ತು ನಂಬಿಕೆ ಎಂಬ ಎರಡು ಆಧಾರ ಸ್ಥoಭಗಳ ಮೇಲೆ ನಿಂತಿರುವ ಪ್ರವಾಸೋಧ್ಯಮ ಕ್ಷೇತ್ರದಲ್ಲಿ 30 ವರ್ಷಗಳಿಂದ ತೊಡಗಿಸಿಕೊಂಡಿರುವ ಅಡಿಗಾಸ್ ಸಂಸ್ಥೆ ಅಪಾರ ಜನ ಮನ್ನಣೆಯನ್ನು ಗಳಿಸಿದೆ. ಹಾದಿ ಬೀದಿ ಗೊಂದರಂತೆ ದಿನವೂ ಆರಂಭವಾಗಿ ಮುಚ್ಚಿ ಹೋಗುವ ನೂರಾರು ಟೂರ್ ಆಪರೇಟರ್ ಗಳ ಮಧ್ಯೆ ಅಡಿಗಾಸ್ ಸಂಸ್ಥೆ ತನ್ನದೇ ಚಾಪನ್ನು ಮೂಡಿಸಿ ಯಶಸ್ವಿಯಾಗಿ ಮುನ್ನೆಡೆದಿದೆ. ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಸಂಸ್ಥೆಯ ಮು ಡಿಗೇರಿದೆ. ಭಾರತ ಸರಕಾರದ ಪ್ರವಾಸೋಧ್ಯಮ ಸಚಿವಾಲಯದ ” ಅನುಭವಿ ಸೇವಾ ಪೂರೈಕೆದಾರ “, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಇಲಾಖೆಯಿಂದ ಮಾನ್ಯತೆ, ಸತತ 4 ವರ್ಷಗಳಿಂದ ಅತ್ಯುತ್ತಮ ಪ್ರವಾಸಿ ಸಂಸ್ಥೆ ಎಂಬ ಹೆಗ್ಗಳಿಕೆ ಮತ್ತು ಪ್ರಶಸ್ತಿ, ಇಕನಾಮಿಕ್ಸ್ ಟೈಮ್ಸ್ ನಿಂದ ಉತ್ತಮ ಪ್ರವಾಸಿ ಸಂಸ್ಥೆ ಎಂಬ ಪ್ರಶಸ್ತಿ ಹೀಗೆ ಹತ್ತು ಹಲವಾರು, ಸಂಸ್ಥೆಯ ಯಶಸ್ಸಿಗೆ ಹಿಡಿದ ಕೈಗನ್ನಡಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಬೆಂಗಳೂರಿನ ಪ್ರಸಿದ್ಧ ಹಾಗೂ ಅನುಭವಿ ಪ್ರವಾಸಿ ಆಯೋಜಕ ಮಾನ್ಯತೆ ಪಡೆದ ಅಡಿಗಾಸ್ ಯಾತ್ರಾದ ಪ್ರವಾಸ ದರ್ಶನದ ಮಾಹಿತಿ ಕೈಪಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನಾವರಣಗೊಳಿಸಿ ಶುಭ ಹಾರೈಸಿದರು.

ಅಡಿಗಾಸ್ ಯಾತ್ರಾದ ಸಂಸ್ಥಾಪಕ ಹಾಗೂ ಮಾಲಕರಾದ ಕೆ. ನಾಗರಾಜ ಅಡಿಗ , ಆಶಾ ಅಡಿಗ, ,ಆದಿತ್ಯ ಅಡಿಗ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ನಾಗೇಂದ್ರ, ಆದಿತ್ಯ ಭಟ್, ಮಹೇಶ್ ಹೆಚ್.ಜೆ, ಎಂ. ರಮೇಶ್, ಶಶಾಂಕ್ ಕುಮಾರ್ ಕೆ, ಪ್ರಸನ್ನ ಎಚ್ ಕೆ, ನರೇಶ್ ಕೆ. ಮತ್ತು ಉಜಿರೆಯ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

 

Related Articles

Back to top button