ಅಂಗನವಾಡಿ ಶಿಕ್ಷಕಿ ಜೊತೆ ಅಕ್ರಮ ಸಂಬಂಧ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಜಾತ್ರೆಗೆ ಕರೆದುಕೊಂಡು ಹೋಗಿ ಭೀಕರ ಹತ್ಯೆ
Views: 489
ಕನ್ನಡ ಕರಾವಳಿ ಸುದ್ದಿ: ಅಂಗನವಾಡಿ ಶಿಕ್ಷಕಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ.
ಅಶ್ವಿನಿ ಪಾಟೀಲ್ ಹತ್ಯೆಯಾದ ಅಂಗನವಾಡಿ ಶಿಕ್ಷಕಿ. ಶಂಕರ್ ಪಾಟೀಲ್ ಎಂಬಾತ ಅಶ್ವಿನಿಯನ್ನು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಶಂಕರ್ ಪಾಟೀಲ್ ಅಶ್ವಿನಿ ಬಳಿ ಶಂಕರ್ ಪಾಟೀಲ್ 5 ಲಕ್ಷ ಸಾಲ ಪಡೆದುಕೊಂಡಿದ್ದನು. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ರೊಚ್ಚಿಗೆದ್ದ ಶಂಕರ್ ಆಕೆಯನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಅಲ್ಲದೇ ಈತ ಅಶ್ವಿನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು ಎನ್ನಲಾಗಿದೆ. ಜಾತ್ರೆಗೆ ಹೋದ ಅಶ್ವಿನಿ ಮನೆಗೆ ಬಾರದೇ ಹಿನ್ನೆಲೆ ನಂದಗಡ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.
ನಂತರ ಕಾರವಾರದ ರಾಮನಗರದಲ್ಲಿ ಅಶ್ವಿನಿ ಮೃತದೇಹ ಪತ್ತೆಯಾಗಿತ್ತು. ನಂತರ ಅನುಮಾನಗೊಂಡ ಪೊಲೀಸರು ಶಂಕರ್ ಪಾಟೀಲ್ ನನ್ನು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೊದಲು ಅಶ್ವಿನಿ ಹಾಗೂ ಶಂಕರ್ ಇಬ್ಬರು ಸ್ನೇಹಿತರಾಗಿದ್ದರು. ಆದರೆ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಅಶ್ವಿನಿ ಪತಿ ಕಳೆದ ಸುಮಾರು ವರ್ಷದಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು.ಮಗ ಕೂಡ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.






