₹2000 ನೋಟು ಆಯಸ್ಸು ಇಂದು ಕೊನೆಯ ದಿನ, ಇವತ್ತೇ ಬ್ಯಾಂಕ್ಗೆ ಹೋಗಿ ಬದಲಾಯಿಸಿಕೊಳ್ಳಿ
ಬಡವರು ಮಧ್ಯಮವರ್ಗದ ಜನರಿಗೆ ಅದರಲ್ಲೂ ಹಳ್ಳಿಗಾಡಿನ ಜನ ಈಗಲೂ 2000 ನೋಟುಗಳನ್ನು ಭದ್ರವಾಗಿ ಇಟ್ಕೊಂಡಿರ್ತಾರೆ. ಅಂಥವರು ಇಂದೇ ಮಿಸ್ ಮಾಡ್ದೇ ಬ್ಯಾಂಕ್ಗಳಿಗೆ ಹೋಗಿ ಕಟ್ಬಿಡಿ

Views: 28
ಇಂದು ಸಂಜೆಯಿಂದ 2000 ರೂಪಾಯಿ ನೋಟಿಗೆ ಬೆಲೆ ಇರಲ್ಲ. ಹಾಗಾಗಿ ನಿಮ್ಮ ಹತ್ತಿರ ಎರಡು ಸಾವಿರ ರೂಪಾಯಿ ನೋಟುಗಳಿದ್ದರೆ ಇವತ್ತೇ ಬ್ಯಾಂಕ್ಗೆ ಹೋಗಿ ಬದಲಾಯಿಸಿಕೊಳ್ಳಿ. ಇಲ್ಲಾಂದರೆ ಅಕೌಂಟ್ಗೆ ಜಮೆ ಮಾಡಿ.
₹2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಇವತ್ತೇ ಕೊನೆ ದಿನ
ಇಂದು ಸಂಜೆಯೊಳಗೆ ಬ್ಯಾಂಕ್ಗಳಿಗೆ 2000 ರೂಪಾಯಿ ನೋಟುಗಳಿದ್ದರೆ ಕಟ್ಟಿಬಿಡ್ಬೇಕು. ಆಮೇಲೆ ಕಟ್ಟೋಣ ಅಂದರೆ ಆಗಲ್ಲ. ಏಕೆಂದರೆ ಭಾನುವಾರದಿಂದ 2000 ರೂಪಾಯಿ ನೋಟಿಗೆ ನಯಾಪೈಸೆ ಬೆಲೆನೂ ಇರಲ್ಲ
2016ರಲ್ಲಿ 2000 ರೂಪಾಯಿ ನೋಟ್ ಪರಿಚಯ ಆಯ್ತು. 2018ರಲ್ಲಿ 2000 ರೂಪಾಯಿ ಮುದ್ರಣ ಸ್ಥಗಿತವಾಯ್ತು. ಇಂದು ಅಂದರೆ 2023 ಅಕ್ಟೋಬರ್ 07ಕ್ಕೆ ₹2000 ನೋಟು ಅಮಾನ್ಯವಾಗ್ತಿದೆ.
ಮೂಲಗಳ ಪ್ರಕಾರ ಕಪ್ಪುಹಣವಾಗಿ 2000 ನೋಟುಗಳ ಬಳಕೆ ಹೆಚ್ಚಳ ಆಗಿತ್ತು. ಮಾರುಕಟ್ಟೆಯಲ್ಲಿ 60-65% ನೋಟುಗಳೇ ಮಾಯವಾಗಿತ್ತು. ಹೀಗಾಗಿ ಆರ್ಬಿಐ ಹೊಸನೋಟು ತರಲು ₹2000 ನೋಟು ವಾಪಸ್ ಅಂತ ಘೋಷಿಸಿದೆ
ಕ್ಲೀನ್ ನೋಟ್ ನೀತಿಗಾಗಿ ಬದಲಾವಣೆ RBI ಮುಂದಾಗಿದೆ ಅನ್ನೋದು ಆರ್ಥಿಕ ತಜ್ಞರ ಅಭಿಮತ. ಆರ್ಬಿಐ ಮಾರುಕಟ್ಟೆಗೆ ಬಿಟ್ಟಿದ್ದು, 3 ಲಕ್ಷದ 55 ಸಾವಿರ ಕೋಟಿ ಮೌಲ್ಯದ ನೋಟುಗಳನ್ನು ಇಲ್ಲಿವರೆಗೆ 3 ಲಕ್ಷದ 43 ಸಾವಿರ ಕೋಟಿ ರುಪಾಯಿ 2000 ನೋಟುಗಳು ಬ್ಯಾಂಕ್ಗಳಿಗೆ ವಾಪಸ್ ಆಗಿದೆ.
ಇನ್ನೂ ₹12,000 ಕೋಟಿ ಮೌಲ್ಯದ 2000 ಕರೆನ್ಸಿ ನೋಟುಗಳು ವಾಪಸ್ ಆಗಿಲ್ಲ ಅಂತ ಇವತ್ತು ಆರ್ಬಿಐ ಮಾಹಿತಿ ನೀಡಿದೆ. ಲೆಕ್ಕಾಚಾರ ಏನಾದರೂ ಇರಲಿ, ಬಡವರು ಮಧ್ಯಮವರ್ಗದ ಜನರಿಗೆ ಅದರಲ್ಲೂ ಹಳ್ಳಿಗಾಡಿನ ಜನ ಈಗಲೂ 2000 ನೋಟುಗಳನ್ನು ಭದ್ರವಾಗಿ ಇಟ್ಕೊಂಡಿರ್ತಾರೆ.ಅಂಥವರು ಇಂದೇ ಮಿಸ್ ಮಾಡ್ದೇ ಬ್ಯಾಂಕ್ಗಳಿಗೆ ಹೋಗಿ ಕಟ್ಬಿಡಿ