ಇತರೆ
ಹೆಬ್ರಿ ಸಮೀಪ ಕಾರು ಸ್ಕೂಟಿ ಡಿಕ್ಕಿ ಎಂಬಿಎ ವಿದ್ಯಾರ್ಥಿನಿ ಸಾವು

Views: 164
ಹೆಬ್ರಿ: ಹೆಬ್ರಿ ಸಮೀಪದ ಜಟ್ಕಟ್ ಬಳಿ ರಿಡ್ಜ್ ಕಾರು ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರೆ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಿನ್ನೆ ಸಂಜೆ ನಡೆದಿದೆ.
ಸ್ಕೂಟಿ ಸವಾರೆ ಮಣಿಪಾಲ ಕಾಲೇಜೊಂದರಲ್ಲಿ ಎಂಬಿಎ ಕಲಿಯುತ್ತಿದ್ದ ಜಸ್ವಿನಿ ಎಚ್. ರೆಡ್ಡಿ ಮೃತಪಟ್ಟ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹೆಬ್ರಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಹೆಬ್ರಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.