ಇತರೆ

ಹುಲಿಕಲ್ ಘಾಟಿ ಕುಸಿತ: ಆರು ಚಕ್ರದ ವಾಹನಗಳಿಗೆ ಅವಕಾಶ

Views: 181

ಕನ್ನಡ ಕರಾವಳಿ ಸುದ್ದಿ:ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚಿಸಿ ತಾತ್ಕಾಲಿಕ ಆದೇಶವನ್ನು ಜಿಲ್ಲಾಧಿಕಾರಿಯವರು ಹೊರಡಿಸಿದ್ದಾರೆ.

ಆದರೆ ಇದೀಗ ಉಭಯ ಜಿಲ್ಲೆಯ ಆರ್‌ಟಿಒಗಳು ಆರು ಚಕ್ರ ಕೆಳಗಿನ ವಾಹನಗಳಿಗೆ ಅವಕಾಶಗಳು ನೀಡಿ ಆದೇಶಿಸಿದ್ದಾರೆ.

ಹೊಸಂಗಡಿ ಚೆಕ್‌ಪೋಸ್ಟ್ ಮತ್ತು ಮಾಸ್ತಿಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಘನ ವಾಹನಗಳನ್ನು ತಡೆದು ವಾಪಸ್ ಕಳಿಸುತ್ತಿದ್ದಾರೆ. ಆದರೆ ಕೆಲವೊಂದು ವಾಹನ ಸವಾರರಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಈ ಚೆಕ್ ಪೋಸ್ಟ್‌ಗಳ ತನಕ ಬಂದು ವಾಪಸ್ ತೆರಳುತ್ತಿದ್ದಾರೆ.

ಬದಲಿ ಮಾರ್ಗಗಳು

*ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ರಾಜ್ಯ ಹೆದ್ದಾರಿ-52ರಲ್ಲಿ ಹೋಗುವ ಭಾರಿ ವಾಹನಗಳು ಈಗಿನ ತೀರ್ಥಹಳ್ಳಿ-ರಾವೆ ಕಾನುಗೋಡು ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ ರಸ್ತೆ ಬದಲು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ-ರಾವೆ ಕಾನುಗೋಡು-ನಗರ -ಕೊಲ್ಲೂರು ಮೂಲಕ ಕುಂದಾಪುರ ರಸ್ತೆ ಸೇರಬಹುದು.

*ನಗರ ಸಿದ್ದಾಪುರ ರಾಜ್ಯ ಹೆದ್ದಾರಿ-278 ರಸ್ತೆ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ ಯಡೂರು- ಮಾಸ್ತಿಕಟ್ಟೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರಕ್ಕೆ ತೆರಳಬಹುದು.

*ಶಿವಮೊಗ್ಗ/ ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾಗಿ ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಅನಂತರ ಹೊನ್ನಾವರದಿಂದ-ಭಟ್ಕಳ-ಬೈಂದೂರು-ಕುಂದಾಪುರಕ್ಕೆ ತೆರಳಬಹುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Related Articles

Back to top button