ಇತರೆ

ಹಲಸಿನಕಾಯಿ ಕೊಯ್ಯುವಾಗ ಕೊಕ್ಕೆಗೆ ಕಟ್ಟಿದ ಕತ್ತಿ ಜಾರಿ ಬಿದ್ದು ವ್ಯಕ್ತಿ  ಸಾವು 

Views: 135

ಉಡುಪಿ:ಹಲಸಿನ ಮರದಿಂದ ಹಲಸಿನಕಾಯಿ ಕೊಯ್ಯುವಾಗ ಆಕಸ್ಮಿಕವಾಗಿ ಕೊಕ್ಕೆಗೆ ಕಟ್ಟಿದ ಕತ್ತಿ ಜಾರಿ ಬಿದ್ದು ವ್ಯಕ್ತಿಯೊಬ್ಬ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ವಂಡಾರು ಎಂಬಲ್ಲಿ ನಡೆದಿದೆ.

ಉಡುಪಿ ತಾಲೂಕಿನ ಮಾರ್ವಿ ಕಂಡಿಮಕ್ಕಿ ನಿವಾಸಿ ಕುಷ್ಟ( 71) ಎಂಬುವರು ಜಮೀನಿನಲ್ಲಿರುವ ಹಲಸಿನ ಮರಕ್ಕೆ ಎಣಿ ಇಟ್ಟು ಮರ ಏರಿ ಹಲಸಿನ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೊಕ್ಕೆಯಿಂದ ಕತ್ತಿ ಜಾರಿ ತೋಳಿಗೆ ತಾಗಿ ಸೀಳಿ ಹೋಗಿದ್ದು ಅವರಿಗೆ ವಿಪರೀತ ರಕ್ತಸ್ರಾವ ಉಂಟಾಗಿ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದು,  ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರ ಪುತ್ರ ದಿನೇಶ್ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related Articles

Back to top button