ಧಾರ್ಮಿಕ
ಹಂಗಾರಕಟ್ಟೆ ಬಾಳ್ಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ ನಿಧನ

Views: 284
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಹಂಗಾರಕಟ್ಟೆ ಬಾಳ್ಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ (53) ಶುಕ್ರವಾರ ನಿಧನರಾದರು.
ಶುಕ್ರವಾರ ಬೆಳಿಗ್ಗೆ ಡಯಾಲಿಸಿಸ್‌ಗೆ ಕರೆದುಕೊಂಡು ಹೋಗುವಾಗ ಬ್ರಹ್ಮಾವರದ ಬಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾರಿಮಧ್ಯದಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ. ಮಠದ ಕಿರಿಯ ಶ್ರೀಗಳಾದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅವರು ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.
ಮಠದ ಪೂರ್ವ ಸ್ವಾಮೀಜಿಗಳಾದ ಶಂಕರಾಶ್ರಮ ಸ್ವಾಮೀಜಿ ನಿಧನದ ಬಳಿಕ ನೃಸಿಂಹಾಶ್ರಮ ಸ್ವಾಮೀಜಿ 2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿಗಳಾಗಿದ್ದರು. ಶೃಂಗೇರಿ ಹಿರಿಯ ಶ್ರೀಗಳ ನೇತೃತ್ವದಲ್ಲಿ ಹೆಬ್ಬೂರು ಮಠದ ನಾರಾಯಣಾಶ್ರಮ ಸ್ವಾಮೀಜಿ ಅವರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು.