ಶಿಕ್ಷಣ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಶ್ರೇಷ್ಠವಾದ ಲಕ್ಷ್ಯದ ಸಾಧನೆ- ಮದರ್ ತೆರೆಸಾದ ವಿದ್ಯಾರ್ಥಿಗಳಿಗೆ JEE, NEET, CET ಕುರಿತು ಉಪನ್ಯಾಸ ಕಾರ್ಯಕ್ರಮ

ಶಿಕ್ಷಣವೇ ನಮ್ಮ ಭವಿಷ್ಯದ ಬುನಾದಿ, ಶ್ರಮದ ಹಾದಿಯೇ ನಿಜವಾದ ಯಶಸ್ಸಿನ ದಾರಿ --- ಮಿತೇಷ್ ಕುಮಾರ್ ಮೂಡುಕೋಣಾಜೆ

Views: 40

ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದಲ್ಲಿ ಯಾವ ಮಾರ್ಗವನ್ನು ಆರಿಸಬೇಕು ಎನ್ನುವ ಜ್ಞಾನ ಪಯಣಕ್ಕೆ ದಿಕ್ಕು ತೋರಿಸುವ ನಿಟ್ಟಿನಲ್ಲಿ “ಲಕ್ಷ್ಯ – ವೃತ್ತಿ ಮಾರ್ಗದರ್ಶನ ” ಕಾರ್ಯಕ್ರಮವನ್ನು ಜುಲೈ 30 ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಮಾರ್ಗದರ್ಶಕರು,ಶಿಕ್ಷಣ ಹಕ್ಕು ಹೋರಾಟಗಾರರು,ಉದ್ಯಮಿಗಳು ಮಾತ್ರವಲ್ಲದೆ ವಿದ್ಯಾರ್ಥಿ ಹಕ್ಕುಗಳು ಹಾಗೂ ಶಿಕ್ಷಣ ವ್ಯವಸ್ಥೆಯ ಪರಿವರ್ತನೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ವೃತ್ತಿ ಮಾರ್ಗದರ್ಶಕರಾದ ಶ್ರೀ ಮಿತೇಷ್ ಕುಮಾರ್ ಮೂಡು ಕೊಣಾಜೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೊಬೊರವರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.

ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮಿತೇಷ್ ಕುಮಾರ್  

ಇನ್ನೇನು ಭವಿಷ್ಯದತ್ತ ಚಿತ್ತ ಹರಿಸಬೇಕೆಂದು ಯೋಚಿಸುತ್ತಿರುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗು ಉಜ್ವಲ ಭವಿಷ್ಯದ ಕನಸ್ಸು ಕಾಣುತ್ತಿರುವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ, ತಮ್ಮ ಭವಿಷ್ಯದ ಗುರಿಯನ್ನು ತಲುಪಲು ಅನುಸರಿಸಬೇಕಾದ ಮಾರ್ಗದ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು., ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ದಾತ್ಮಕ ಪರೀಕ್ಷೆಗಳ ಮಹತ್ವ, ಪ್ರವೇಶ ಪರೀಕ್ಷೆಗಳ ಕುರಿತು ಅರಿವು ಮತ್ತು ಉನ್ನತ ಅಧ್ಯಯನ ಪ್ರವೇಶ ಮಾರ್ಗಸೂಚಿಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿದರು. ವಿಶೇಷವಾಗಿ JEE,NEET, KCET, IATಯಂತಹ ಪ್ರವೇಶ ಪರೀಕ್ಷೆಗಳ ರೂಪುರೇಷೆ, ಅವುಗಳ ಫಲಿತಾಂಶ ಪಟ್ಟಿಯ ವಿಂಗಡಣೆ, ಸೀಟು ಹಂಚಿಕೆ, ವಿವಿಧ ಕಾಲೇಜುಗಳಲ್ಲಿ ವರ್ಗವಾರು ಸೀಟುಗಳ ಶುಲ್ಕದ ವಿವರ, ಕಾಲೇಜುಗಳಿಗೆ ಪ್ರವೇಶಿಸುವ ಪ್ರಕ್ರಿಯೆ, ಕಾಲೇಜು ಪ್ರವೇಶಕ್ಕೆ ಬೇಕಾಗುವ ತಯಾರಿ, ಪ್ರಚಲಿತದಲ್ಲಿರುವ ಹಲವಾರು ಮೀಸಲಾತಿ ಅವಕಾಶಗಳ ಬಳಕೆ, ಹೀಗೆ ಮುಂತಾದ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿಚಾರಗಳನ್ನು ತಿಳಿ ಹೇಳುತ್ತಾ. ”ಯುದ್ದ ಕಾಲೇ ಶಸ್ತ್ರಾಭ್ಯಾಸ ಸಲ್ಲದು” ಎಂಬುದನ್ನು ಮನದಟ್ಟು ಮಾಡಿಸಿದರು. ಕೊನೆಯಲ್ಲಿ ಹಲವಾರು ಸಾಧಕರ ಉದಾಹರಣೆಗಳನ್ನು ನೀಡುವುದರ ಮೂಲಕ,”ಮುಂದೇನು? ” ಎಂದು ಚಿಂತಿಸುತ್ತಿದ್ದ ವಿದ್ಯಾರ್ಥಿಗಳಿಗೆ ಆಶಾಕಿರಣವಾದರು. ಎಲ್ಲ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮುಂದಿಟ್ಟು ಕೊನೆಯಲ್ಲಿ ಮದರ್ ತೆರೆಸಾರ ಕಥೆಯೊಂದನ್ನು ಹೇಳಿ ” life is in your hand you want to fly or die ” ಎನ್ನುವುದನ್ನು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟರು.

 ವೃತ್ತಿ ಮಾರ್ಗದರ್ಶನದ ಜೊತೆಗೆ ಇನ್ನೊಂದು ಅವಧಿಯ ಕಾರ್ಯಕ್ರಮ ನಡೆಯಿತು. ಇದನ್ನು ಭಾಷಾ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಕುಮಾರಿ ಅಲಿಟಾ ಡೇಸಾ ಇವರು ವಿದ್ಯಾರ್ಥಿ ಪ್ರತಿನಿಧಿಯಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿದ ಒಂದಿಷ್ಟು ಪ್ರಶ್ನೆಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮಿತೇಷ್ ಕುಮಾರ್ ಹಾಗೂ ಮದರ್ ತೆರೆಸಾ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ಜೈಸನ್ ಲೂವಿಸ್ ರವರ ಮುಂದಿಟ್ಟು ಎಲ್ಲಾ ವಿದ್ಯಾರ್ಥಿಗಳಲ್ಲಿ ಇರಬಹುದಾದ ಅನೇಕ ಗೊಂದಲಗಳಿಗೆ ಉತ್ತರವನ್ನು ದೊರಕಿಸಿ ಕೊಟ್ಟರು. ಕೊನೆಯಲ್ಲಿ ವಿದ್ಯಾರ್ಥಿಗಳ ಹಾಗೂ ಗಣ್ಯರ ನಡುವಿನ ಮುಕ್ತ ಚರ್ಚೆಗೆ ಅವಕಾಶವನ್ನು ಕಲ್ಪಿಸಲಾಯಿತು ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರು , ಪೋಷಕ ವೃಂದದವರು, ಉಪನ್ಯಾಸಕ ಬಂಧುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವಿನೂತನ ಕಾರ್ಯಕ್ರಮವನ್ನು ಶ್ರೀಮತಿ ವೈಶಾಲಿ ಎಸ್. ಶೆಟ್ಟಿ ನಿರೂಪಿಸಿದರು, ಹಾಗೂ ಕುಮಾರಿ ಅಲಿಟಾ ಡೇಸಾ ಅವರ ವಂದನಾರ್ಪಣೆಯೊಂದಿಗೆ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

Related Articles

Back to top button
error: Content is protected !!