ಯುವಜನ

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ, ಸ್ಕೂಟಿ ಡಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು

Views: 29

ಕನ್ನಡ ಕರಾವಳಿ ಸುದ್ದಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಳಾಲು ನೀರಕಟ್ಟೆ ಎಂಬಲ್ಲಿ ಲಾರಿ ಮತ್ತು ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಚಾಲಕ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಉಪ್ಪಿನಂಗಡಿ ಪದವಿ ಮಹಾವಿದ್ಯಾಲಯದ ಅಂತಿಮ ಬಿಎ ವಿದ್ಯಾರ್ಥಿ ಪೆರಿಯಡ್ಕ ಸಮೀಪದ ಬೊಳ್ಳಾವು ನಿವಾಸಿ ಶಿವಣ್ಣ ಸಪಲ್ಯ ಎಂಬವರ ಪುತ್ರ ಕಾರ್ತಿಕ್ (19) ಅಪಘಾತದಲ್ಲಿ ಮೃತಪಟ್ಟ ಯುವಕ.

ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ ಹಿರೆಬಂಡಾಡಿ ಗ್ರಾಮದ ಎಲಿಯ ನಿವಾಸಿ ಅಧ್ಯಾಪಕಿಯೊಬ್ಬರ ಮಗಳು ಎಂದು ತಿಳಿದು ಬಂದಿದೆ.

ಚತುಷ್ಪಥ ರಸ್ತೆಯಾಗಿರುವ ನೀರಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಗೆ ಸ್ಕೂಟಿ ಸವಾರನ ಅತೀ ವೇಗದ ಚಾಲನೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿಗೆ ಸ್ಕೂಟಿ ಸವಾರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಕಾರ್ತಿಕ್ ಮೃತಪಟ್ಟಿದ್ದು, ಸಹಸವಾರೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Related Articles

Back to top button
error: Content is protected !!