ಮಾಹಿತಿ ತಂತ್ರಜ್ಞಾನ
“ಡಿಜಿಟಲ್ ಅರೆಸ್ಟ್” 9400 ವಾಟ್ಸಾಪ್ ಖಾತೆ ಸ್ಥಗಿತ
Views: 13
ಕನ್ನಡ ಕರಾವಳಿ ಸುದ್ದಿ: ಸೈಬರ್ ವಂಚಕರು ಸೇರಿದಂತೆ ಅಪರಾಧ ಲೋಕದವರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಜನ ರನ್ನು ವಂಚಿಸಿ ಕೋಟ್ಯಂತರ ಹಣ ದೋಚುವುದು ನಡೆಯು ತ್ತಿದೆ. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈವರೆಗೆ ದೇಶದಲ್ಲಿ ಒಟ್ಟು 9400 ವಾಟ್ಸಾಪ್ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ”
ಇದಿಷ್ಟೇ ಅಲ್ಲದೇ, ದೂರಸಂಪರ್ಕ ಕ್ಷೇತ್ರದ ನಿಯಂತ್ರಣ ಸಂಸ್ಥೆಗಳು, ದೂರವಾಣಿ ಸೇವಾ ಕಂಪನಿಗಳು, ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ), ಕೇಂದ್ರದ ತನಿಖಾ ದಳ(ಸಿಬಿಐ) ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣ ಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುತ್ತಿವೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ಮಾಹಿತಿ ನೀಡಿದೆ.






