ಸರಕಾರಿ ಪಿಯು ಅತಿಥಿ ಉಪನ್ಯಾಸಕರ ಗೌರವಧನ ಕಡಿತ ಅನ್ಯಾಯ

Views: 16
ಸರಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಅಗಸ್ಟ್, ಸೆಪ್ಟೆಂಬರ್, ಹಾಗೂ ಅಕ್ಟೋಬರ್ ತಿಂಗಳ ಗೌರವಧನ ಬಿಡುಗಡೆಯಾಗಿದೆ ಈಗಾಗಲೇ 4055 ಪದವಿ ಪೂರ್ವ ಅತಿಥಿ ಉಪನ್ಯಾಸಕರ ಈ ಮೂರು ತಿಂಗಳ ಸಂಪೂರ್ಣ ಗೌರವಧನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಆದರೆ ಪದವಿ ಪೂರ್ವ ಇಲಾಖೆಯ ಸುತ್ತೋಲೆಯ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಉಪನ್ಯಾಸಕರ ಕಾರ್ಯನಿರ್ವಹಿಸಿದ ದಿನಗಳಿಗೆ ಮಾತ್ರ ವೇತನ ನೀಡಬೇಕೆಂದು ಆದೇಶಿಸಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಜಲಿಂಗಪ್ಪ ಕಾಳೆ ಹೇಳಿದರು. ಇದರಿಂದ ಅತಿಥಿ ಉಪನ್ಯಾಸಕರಿಗೆ ಪೂರ್ಣ ಪ್ರಮಾಣದ ಗೌರವಧನ ದೊರೆಯುತ್ತಿಲ್ಲ ಆದ್ದರಿಂದ ಉಪ ನಿರ್ದೇಶಕರು ಪದವಿ ಪೂರ್ವ ಇಲಾಖೆ ಇವರಿಗೆ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿ ಮಾತನಾಡಿದ ಅವರು ದಸರಾ ಮಧ್ಯಂತರ ರಜೆಗಳನ್ನು ಪರಿಗಣಿಸಿ ಗೌರವಧನ ಕಡಿತ ಗೊಳಿಸುತ್ತಿರುವದು ಅತಿಥಿ ಉಪನ್ಯಾಸಕರಿಗೆ ಮಾಡುವ ಅನ್ಯಾಯವಾಗಿದೆ ಶಾಲಾ ಅತಿಥಿ ಶಿಕ್ಷಕರಿಗೆ ಹಾಗೂ ಪದವಿ ಅತಿಥಿ ಉಪನ್ಯಾಸಕರಿಗೆ ಸರ್ಕಾರವೆ ಪೂರ್ಣ ವೇತನ ನೀಡಿದೆ ಆದರೆ ಅತಿಥಿ ಉಪನ್ಯಾಸಕರಿಗೆ ಗೌರವಧನ ಕಡಿತವಾಗುತ್ತಿರುವದು ಎಲ್ಲರಿಗೂ ನೋವನ್ನುಂಟು ಮಾಡಿದೆ ಎಂದು ಹೇಳಿದರು. ಅಕ್ಟೋಬರ್ ತಿಂಗಳ ಪೂರ್ಣ ಪ್ರಮಾಣದ ಗೌರವಧನವನ್ನು ಬಿಡುಗಡೆ ಮಾಡಲು ಪದವಿ ಪೂರ್ವ ಇಲಾಖೆಗೆ ಆದೇಶ ನೀಡಬೇಕೆಂದು ಮನವಿಯಲ್ಲಿ ತಿಳಿಸಿದರು. ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಜಲಿಂಗಪ್ಪ ಕಾಳೆ. ಕಾರ್ಯದರ್ಶಿ ಜಟ್ಟಿಂಗರಾಯ ಹೊಸುರ.ರಾಜಕುಮಾರ ದ್ಯಾಮಗೊಂಡ.ಮಲ್ಲಣ್ಣಾ ಬಬಲಾದ.ವಿಜಯಕುಮಾರ ಪಾಟೀಲ್.ಭೀಮಾಶಂಕರ ಸಪಳಿ.ಮಹಾವಿರ ಹೊಸಮನಿ.ಸಿದ್ದರಾಮ ಹೊಟಗಿ ದಾನಪ್ಪ ಸಾರವಾಡ.ಅರವಿಂದ ಕಾಂಬಳೆ.ಸಾವಿತ್ರಿ ದ್ಯಾಮಗೊಂಡ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.