ಶಿಕ್ಷಣ

ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ” ಬಸವಣ್ಣನವರ ಭಾವಚಿತ್ರ ಅನಾವರಣ”

“ಬಸವಣ್ಣನವರು 12ನೇ ಶತಮಾನದಲ್ಲಿ ಬಾಳಿ ಬದುಕಿದ ಸಮಾಜ ಸುಧಾರಕರು. ಅವರು ಅನುಭವ ಮಂಟಪವನ್ನು ಸ್ಥಾಪಿಸಿ ಸಮಕಾಲೀನ ಎಲ್ಲ ಸಮಾಜ ಸುಧಾರಕರನ್ನು ಒಟ್ಟಿಗೆ ಸೇರಿಸಿ ಸಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಈ ಮೂಲಕ ಇಂದಿನ ನಮ್ಮ ಸಂವಿಧಾನದ ಆಶಯಗಳನ್ನು ಅಂದಿನ ಸಮಾಜದಲ್ಲಿ ಜಾರಿಗೆ ತರುವಲ್ಲಿ ಶ್ರಮ ವಹಿಸಿದ್ದರು”

Views: 12

ಕುಂದಾಪುರ: “ಬಸವಣ್ಣನವರು 12ನೇ ಶತಮಾನದಲ್ಲಿ ಬಾಳಿ ಬದುಕಿದ ಸಮಾಜ ಸುಧಾರಕರು. ಅವರು ಅನುಭವ ಮಂಟಪವನ್ನು ಸ್ಥಾಪಿಸಿ ಸಮಕಾಲೀನ ಎಲ್ಲ ಸಮಾಜ ಸುಧಾರಕರನ್ನು ಒಟ್ಟಿಗೆ ಸೇರಿಸಿ ಸಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಈ ಮೂಲಕ ಇಂದಿನ ನಮ್ಮ ಸಂವಿಧಾನದ ಆಶಯಗಳನ್ನು ಅಂದಿನ ಸಮಾಜದಲ್ಲಿ ಜಾರಿಗೆ ತರುವಲ್ಲಿ ಶ್ರಮ ವಹಿಸಿದ್ದರು” ಎಂದು ನಾಗರಾಜ ವೈದ್ಯ ಎಂ. ವಿಭಾಗ ಮುಖ್ಯಸ್ಥರು, ಕನ್ನಡ ವಿಭಾಗ, ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅವರು ಕೋಟೇಶ್ವರ  ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್ ನಾಯಕ ವಹಿಸಿ, ಮಾತನಾಡಿ ಬಸವಣ್ಣನವರು ವರ್ಗ, ವರ್ಣ, ಲಿಂಗ ತಾರತಮ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು ಹಾಗು ಸಮಾಜ ಸುಧಾರಣೆಯ ಕಾರ್ಯದ ಅಂಗವಾಗಿ ಸಾಮಾನ್ಯ ಜನರಿಗೂ ಸಹ ಅರ್ಥವಾಗುವ ಹಾಗೆ ವಚನಗಳನ್ನು ರಚಿಸಿ ಸರ್ವರಿಗೂ ಸಮಬಾಳು ನೀಡವಲ್ಲಿ ಪ್ರಯತ್ನಿಸಿದರು. ಇವರ ಕಾಯಕವೇ ಕೈಲಾಸ ಎಂಬ ತತ್ವವು ಇಂದಿಗೂ ಕೂಡ ಪ್ರಸ್ತುತ. ಇದನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಇದೇ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ, ಸಂತೋಷ ನಾಯ್ಕ ಹೆಚ್, ಕಾರ್ಯಕ್ರಮಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ, ವೆಟರನ್ ರವಿಚಂದ್ರ ಹೆಚ್. ಎಸ್, ಗ್ರಂಥಪಾಲಕರು, ಕಾರ್ತೀಕ್ ಪೈ, ರೋರ‍್ಸ್ ಲೀಡರ್ ಹಾಗು ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

ಕಾರ್ಯಕ್ರಮವನ್ನು ಸತ್ಯವಾಸ, ಅಂತಿಮ ಬಿ ಕಾಂ ಇವರು ಬಸವಣ್ಣನವರ ವಚನವನ್ನು ವಾಚಿಸುವ ಮೂಲಕ ಪ್ರಾರಂಭಿಸಲಾಯಿತು. ಗೌರೀಶ ಅಂತಿಮ ಬಿ ಕಾಂ, ಕಾರ್ಯಕ್ರಮವನ್ನು ನಿರ್ವಹಿಸಿದರು. ಹರ್ಷಿತ್ ಅಂತಿಮ ಬಿ ಕಾಂ. ಸ್ವಾಗತಿಸಿದರು, ನರೇಂದ್ರ, ಅಂತಿಮ ಬಿ ಎಸ್ಸಿ, ವಂದಿಸಿದರು.

Related Articles

Back to top button