ಸಾಮಾಜಿಕ
ವಿವಾಹಿತ ಮಹಿಳೆಗೆ ಮನೆ ಕೆಲಸ ಮಾಡಲು ಹೇಳುವುದು ತಪ್ಪಲ್ಲ ಕುಟುಂಬದ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ :ಹೈಕೋರ್ಟ್

Views: 63
ಹೆಂಡತಿ ಮನೆ ಕೆಲಸವನ್ನು ಮಾಡಬೇಕೆಂದು ಪತಿ ಬಯಸೋದು ಕ್ರೌರ್ಯವಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬಳು ತನ್ನ ಪತಿ ತನಗೆ ಮನೆ ಕೆಲಸ ಮಾಡಲು ಹೇಳುತ್ತಾನೆಂದು ಕೋರ್ಟ್ ಮೆಟ್ಟಿಲೇರಿದ್ದಳು.
ಕ್ರೌರ್ಯದ ಆರೋಪ ಹೊರಿಸಿ ಡಿವೋರ್ಸ್ ಬೇಕೆಂದು ಕೋರ್ಟ್ಗೆ ಅರ್ಜಿ ಹಾಕಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ಪೀಠ, ಜೀವನದ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ದಾಂಪತ್ಯದ ಉದ್ದೇಶ. ಇದರ ಭಾಗವಾಗಿ ಪತಿ ತನ್ನ ಹೆಂಡತಿ ಮನೆಕೆಲಸಗಳನ್ನು ಮಾಡಬೇಕೆಂದು ಹೇಳುವುದು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದೆ.
ವಿವಾಹಿತ ಮಹಿಳೆಗೆ ಮನೆ ಕೆಲಸ ಮಾಡಲು ಹೇಳುವುದು ತಪ್ಪಲ್ಲ. ಆಕೆ ಮಾಡುವ ಮನೆಗೆಲಸ ಕೆಲಸಕ್ಕೆ ಸಮನಾಗಿ ನೋಡಲು ಸಾಧ್ಯವಿಲ್ಲ. ಯಾಕೆಂದರೆ ಅದು ಅವಳ ಕುಟುಂಬದ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ ಎಂದು ಪರಿಗಣಿಸಲಾಗುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಮುಂದಿನ ಜೀವನದ ಜವಾಬ್ದಾರಿ ಹಂಚಿಕೊಳ್ಳುವುದು ಉದ್ದೇಶ ಆಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.